‘ಕಾವ್ಯಕ್ಕೆ ಉರುಳು’ ಭಾಗ-1 ಕೃತಿಯು ರಾಜಶೇಖರ ಮಠಪತಿ(ರಾಗಂ) ಅವರ ಇತಿಹಾಸದ ಸತ್ಯ ಕತೆಗಳ ಸುತ್ತ ಹೆಣೆದ ಲೇಖನವಾಗಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಅಂಕಣಕ್ಕಾಗಿ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ವಿವಿಧ ದೇಶಗಳಲ್ಲಿ ವ್ಯವಸ್ಥೆಯ ಹಿಂಸೆ, ಅದು ಪ್ರಭುತ್ವ ಅಥವಾ ಸಾಮಾಜಿಕ, ಧಾರ್ಮಿಕ ಯಾವುದೇ ಆಗಿರಬಹುದು. ಅಂಥ ವ್ಯವಸ್ಥೆಯ ದಾಳಿಯನ್ನೆದುರಿಸಿದ, ಅದಕ್ಕೆ ಬಲಿಯಾದ ಚೇತನಗಳ ಪರಿಚಯ ಈ ಕೃತಿಯಲ್ಲಿದೆ. ಭಾರತದಲ್ಲಿ ಸಸ್ಟರ್ ಹನ್ನಿ, ಬಲರಾಜ್ ಸಾಟ್ಯ, ಕೆ. ಎ. ಅಬ್ಬಾಸ್, ಮಂಟೋ ಮುಂತಾದವರಂತೆ ವಿಶ್ವವ್ಯಾಪ್ತಿಯಲ್ಲಿ ಸಾಕ್ರೆಟಿಸ್ ಆದಿಯಾಗಿ ಸಲ್ಮಾನ್ ರಶ್ಮಿ, ತಸ್ಲಿಮಾ, ಫಿದಾ, ಅನ್ನಾ ತೊರೆಂಕೊ, ಫ್ರಾನ್ಸಿಸ್ ಆಡಮ್ಸ್, ಹೆರ್ಮನ್ ಸೇಸ್, ಮಾಫೋಜ್, ಡಿಂಗ್ಡಿಂಗ್ ಹೀಗೆ ಪೂರ್ವದಿಂದ ಪಶ್ಚಿಮದವರೆಗೆ ಭೂಖಂಡದಲ್ಲಿ ತಮ್ಮ ಪರಿಸರದ ಮಿತಿಯನ್ನು ಮೀರಿ ತಮ್ಮ ಸೃಜನಶೀಲತೆಯನ್ನು ಸಾಬೀತುಪಡಿಸಿದವರ ಮತ್ತು ವ್ಯವಸ್ಥೆಗೆ ಮುಖಾಮುಖಿಯಾದವರ, ಬಲಿಯಾದವರ ಬದುಕಿನ ವಿವರಗಳು ರಾಗಂ ಅವರ ಅದ್ಭುತವಾದ ಶೈಲಿಯಲ್ಲಿ ಕಾವ್ಯಕ್ಕೆ ಉರುಳು' ಕೃತಿಯಲ್ಲಿ ದಾಖಲಾಗಿದೆ.
ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...
READ MORE(ಹೊಸತು, ಅಕ್ಟೋಬರ್ 2014, ಪುಸ್ತಕದ ಪರಿಚಯ)
ವ್ಯವಸ್ಥೆಯ ಉರಿ, ಬೆಂಕಿ, ಜ್ವಾಲೆಗೆ ಬಲಿಯಾದ ನೂರಾರು ಚಿಂತಕರ, ಹೋರಾಟಗಾರರ ಕುರಿತ ಲೇಖನಗಳ ಗುಚ್ಛ ಕಾವ್ಯಕ್ಕೆ ಉರುಳು' ಎಂಬ ಕೃತಿ ತಮ್ಮ ಕ್ರಿಯಾಶೀಲ ಚಿಂತನೆ, ಲೇಖನಗಳ ಕಾರಣಕ್ಕೆ ವ್ಯವಸ್ಥೆಯ ಕೆಂಗಣ್ಣಿಗೆ ವಿಶ್ವದ ಹಲವಾರು ಚೇತನಗಳು ಬಲಿಯಾಗಿವೆ. ಅಂಥ ೨೩ ಜನರ ಸಂಕ್ಷಿಪ್ತ ಪರಿಚಯವನ್ನು ಲೇಖಕ ರಾಜಶೇಖರ ಮಠಪತಿ (ರಾಗಂ) ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಅಂಕಣಕ್ಕಾಗಿ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ವಿವಿಧ ದೇಶಗಳಲ್ಲಿ ವ್ಯವಸ್ಥೆಯ ಹಿಂಸೆ, ಅದು ಪ್ರಭುತ್ವ ಅಥವಾ ಸಾಮಾಜಿಕ, ಧಾರ್ಮಿಕ ಯಾವುದೇ ಆಗಿರಬಹುದು. ಅಂಥ ವ್ಯವಸ್ಥೆಯ ದಾಳಿಯನ್ನೆದುರಿಸಿದ, ಅದಕ್ಕೆ ಬಲಿಯಾದ ಜೇತನಗಳ ಪರಿಚಯ ಈ ಕೃತಿಯಲ್ಲಿದೆ. ಭಾರತದಲ್ಲಿ ಸಸ್ಟರ್ ಹನ್ನಿ, ಬಲರಾಜ್ ಸಾಟ್ಯ, ಕೆ. ಎ. ಅಬ್ಬಾಸ್, ಮಂಟೋ ಮುಂತಾದವರಂತೆ ವಿಶ್ವವ್ಯಾಪ್ತಿಯಲ್ಲಿ ಸಾಕ್ರೆಟಿಸ್ ಆದಿಯಾಗಿ ಸಲ್ಮಾನ್ ರಶ್ಚಿ, ತಸ್ಲಿಮಾ, ಫಿದಾ, ಅನ್ನಾ ತೊರೆಂಕೊ, ಫ್ರಾನ್ಸಿಸ್ ಆಡಮ್ಸ್, ಹೆರ್ಮನ್ ಸೇಸ್, ಮಾಫೋಜ್, ಡಿಂಗ್ಡಿಂಗ್ ಹೀಗೆ ಪೂರ್ವದಿಂದ ಪಶ್ಚಿಮದವರೆಗೆ ಭೂಖಂಡದಲ್ಲಿ ತಮ್ಮ ಪರಿಸರದ ಮಿತಿಯನ್ನು ಮೀರಿ ತಮ್ಮ ಸೃಜನಶೀಲತೆಯನ್ನು ಸಾಬೀತುಪಡಿಸಿದವರ ಮತ್ತು ವ್ಯವಸ್ಥೆಗೆ ಮುಖಾಮುಖಿಯಾದವರ, ಬಲಿಯಾದವರ ಬದುಕಿನ ವಿವರಗಳು ರಾಗಂ ಅವರ ಅದ್ಭುತವಾದ ಶೈಲಿಯಲ್ಲಿ ಕಾವ್ಯಕ್ಕೆ ಉರುಳು' ಕೃತಿಯಲ್ಲಿ ದಾಖಲಾಗಿದೆ. ಕೇವಲ ಕುತೂಹಲಕ್ಕಲ್ಲದೆ ವ್ಯವಸ್ಥೆಯ ಕೌರ, ಅಭಿವ್ಯಕ್ತಿ ಸ್ವಾತಂತ್ರ್ಯ, ಹಾಗೂ ಐತಿಹಾಸಿಕ ಸತ್ಯಗಳನ್ನು ಅರಿಯಲು ಬೆಳಕಿಂಡಿಯ ರೂಪದಲ್ಲಿ ಈ ಕೃತಿ ನೆರವಾಗುತ್ತದೆ. ಇದು ಈ ಕೃತಿಯ ಭಾಗ - ೧ ಅಂತಿರುವುದರಿಂದ ಮುಂದೆ ಇನ್ನೂ ಹೆಚ್ಚಿನ ಇಂಥ ಮಾಹಿತಿಗಳನ್ನು ಈ ಲೇಖಕರಿಂದ ನಿರೀಕ್ಷಿಸಬಹುದು.