‘ಕಲೆಯ ಗೊಂಚಲು’ ಹಿರಿಯ ಲೇಖಕ ಬಿ.ವಿ.ಕೆ ಶಾಸ್ತ್ರಿಯವರ ಕಲೆಯ ಕುರಿತಾದ ಲೇಖನಗಳ ಸಂಕಲನವಾಗಿದ್ದು, ಇಲ್ಲಿ ಸಂಗೀತದ ಕುರಿತಾದ ಮಹತ್ವದ ಲೇಖನಗಳಿವೆ. ಮೊದಲನೇ ಭಾಗದಲ್ಲಿ ಸಂಗೀತ ಜಗತ್ತು ಎಂಬ ಶೀರ್ಷಿಕೆಯಡಿ ಸಂಗೀತಕ್ಕೆ ಸಂಬಂಧಿಸಿದ 10 ಲೇಖನಗಳು ಸಂಕಲನಗೊಂಡಿದ್ದರೆ, ಎರಡನೇ ಭಾಗದಲ್ಲಿ ಸಂಗೀತ ಜಗತ್ತಿನ ಕೆಲವರು ಹಿರಿಯರು ಎಂಬ ವಿಭಾಗವಿದೆ. ಇಲ್ಲಿ ಸಂಗೀತ ಕ್ಷೇತ್ರದ ಮಹನೀಯರ ಕುರಿತಾದ ಮಾಹಿತಿಗಳಿವೆ. ಮೂರನೇ ಭಾಗದಲ್ಲಿ ಸಂಗೀತ ಜಗತ್ತಿನ ಕೆಲವು ವಾಸ್ತವ ಕಥೆಗಳು ಎಂಬ ವಿಭಾಗವಿದ್ದು ಬಿಡಾರ ಕೃಷ್ಣಪ್ಪನವರ ಸಂಗೀತ ಪವಾಡಗಳು, ಓಂಕಾರನಾಥ ಮತ್ತು ಮುಸೊಲಿನಿ, ದೀಕ್ಷಿತರ ಗುರುದಕ್ಷಿಣೆ ಸೇರಿದಂತೆ ಆರು ಸಂಗೀತ ಕ್ಷೇತ್ರದ ವಿಭಿನ್ನ ಕತೆಗಳಿವೆ.
ಇತರ ಕಲೆಗಳು ಎಂಬ ವಿಭಾಗದಲ್ಲಿ ಮಗದ ಸುಂದರಿ, ಪಿಕಾಸೋ, ಸಾಂಪ್ರದಾಯಿಕ ಕಲೆ:ಬೆರಗು, ಬೆಡಗು ಸೇರಿದಂತೆ ಹನ್ನೆರಡು ವಿಭಿನ್ನ ಲೇಖನಗಳಿವೆ, ಕೊನೆಯದಾಗಿ ಸಂಗೀತ ವಾದ್ಯಗಳು ಎಂಬ ವಿಭಾಗದಲ್ಲಿ ಆಯಾ ಪ್ರದೇಶಗಳ ವಿಭಿನ್ನ ವಾದ್ಯಗಳ ಪರಿಚಯವನ್ನು ಮಾಡಿಕೊಡಲಾಗಿದೆ. ಒಟ್ಟಾರೆ ಸಂಗೀತ ಜಗತ್ತಿನ ವಿಭಿನ್ನ ಮಾಹಿತಿಗಳನ್ನು ಒಳಗೊಂಡಿರುವ ಈ ಕೃತಿ ಕಲಾಸಕ್ತರಿಗೆ ಒಂದು ಕೈಪಿಡಿಯಂತಿದೆ.
ಸಂಗೀತಗಾರ, ಕಲಾವಿಮರ್ಶಕ, ಲೇಖಕ ಬಿ.ವಿ.ಕೆ. ಶಾಸ್ತ್ರಿ ಅವರು ಜುಲೈ 30, 1916ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ-ವೆಂಕಟಸುಬ್ಬಯ್ಯ, ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಸಂಗೀತದ ಗೀಳು ಹಿಡಿಸಿಕೊಂಡಿದ್ದ ಶಾಸ್ತ್ರಿಗಳು ಭಜನ ಗೋಷ್ಠಿಯೊಂದರಲ್ಲಿ ಹಾಡಿದ್ದನ್ನು ಕೇಳಿದ ಅವರ ಉಪಾಧ್ಯಾಯ ಸುಬ್ರಹ್ಮಣ್ಯಂ ಎಂಬುವರು ಇವರಿಗೆ ಶಾಸ್ತ್ರೀಯ ಸಂಗೀತ ಕಲಿಯುವಂತೆ ಪ್ರೇರೇಪಿಸಿದರು. ಮುಂದೆ ಮೈಸೂರಿಗೆ ಬಂದ ಶಾಸ್ತ್ರಿಗಳಿಗೆ ಆಸ್ಥಾನ ವಿದ್ವಾಂಸ ಚಿಕ್ಕರಾಮರಾಯರಲ್ಲಿ ಕ್ರಮಬದ್ಧ ಪಾಠವಾಯಿತು. ಆ ನಂತರ ಮೈಸೂರಿನ ಜಯಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟಿನಿಂದ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದು ಅದರಲ್ಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದಿದ್ದ ಶಾಸ್ತ್ರಿಗಳು ,ತಮ್ಮೊಳಗಿನ ಸೃಜನಶೀಲ ತುಡಿತಗಳಿಂದ ಸಂಗೀತ ವಿಮರ್ಶಕರಾಗಿ ರೂಪುಗೊಂಡರು. ಅಲ್ಲದೇ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ...
READ MORE