‘ಕಲಾ ಸಂವೇದನೆಯ ಒಳನೋಟಗಳು’ ಹಿರಿಯ ಲೇಖಕ ಕೆ.ವಿ. ಸುಬ್ರಹ್ಮಣ್ಯಂ ಅವರ ಲೇಖನ ಸಂಕಲನ. ಕಲೆಗೆ ಸಂಬಂಧಿಸಿದಂತೆ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಇಲ್ಲಿ ರಾಜಾ ರವಿವರ್ಮ ಮತ್ತು ಭಾರತೀಯ ಕಲೆ, ಕನ್ನಡ ಕಲಾಸಾಹಿತ್ಯ ಒಂದು ಪಕ್ಷಿನೋಟ, ಕಲಾಸೃಷ್ಟಿ ಬದಲಾದ ಆಶಯಗಳು, ಚಿತ್ರಕಲೆಯಲ್ಲಿ ಸಮಕಾಲೀನ ಪ್ರಸ್ತುತತೆ, ಕಲಾಸೃಷ್ಟಿ ಒಂದು ಟಿಪ್ಪಣಿ, ಕಲೆ ಮತ್ತು ಕಲಿಕೆ, ಕರ್ನಾಟಕ ಕಲಾವಿದರು ಸಂವೇದನೆಯ ಹೊಳಹುಗಳು, ಭಾರತೀಯ ಚಿತ್ರ ಮತ್ತು ಶಿಲ್ಪಕಲೆಗಳಲ್ಲಿ ಪಾಶ್ಚಾತ್ಯ ಪ್ರಭಾವ, ಅಭಿವ್ಯಕ್ತಿಯ ಮಾಧ್ಯಮವಾಗಿ ಭೂಮಿ ಸೇರಿದಂತೆ ಹಲವು ಲೇಖನಗಳು ಸಂಕಲನಗೊಂಡಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (1999), ಚೆನ್ನೈನ ಯುನೈಟೆಡ್ ರೈಟರ್ಸ್ ...
READ MORE