About the Author

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (1999), ಚೆನ್ನೈನ ಯುನೈಟೆಡ್ ರೈಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಫೆಲೋ (2004), ಹರ್ಯಾಣದ ಸುಭದ್ರಾ ಕುಮಾರಿ ಚೌವ್ಹಾಣ ಶತಮಾನೋತ್ಸವ ಸಮ್ಮಾನ್ (2004), ಕರ್ನಾಟಕ ಚಿತ್ರಕಲಾ ಪರಿಷತ್ತನಿ ಜೀವಮಾನದ ಸಾಧನೆ ಪುರಸ್ಕಾರ (2014), ಕಲಬುರಗಿಯ ಐಡಿಯಲ್ ಫೈನ್ ಆರ್ಟ್ಸ್ ಸಂಸ್ಥೆಯ ‘ದೃಶ್ಯಭೂಷಣ ಪ್ರಶಸ್ತಿ’, ಬೆಂಗಳೂರು ಆರ್ಟ್ ಫೌಂಡೇಷನ್ ನ ‘ಕಲಾಧ್ಯಾನ್’ ಪುರಸ್ಕಾರಗಳು ಅವರಿಗೆ ಸಂದಿವೆ.

ಕೆ.ವಿ. ಸುಬ್ರಹ್ಮಣ್ಯಂ

(18 Dec 1949)

BY THE AUTHOR