ಲೇಖಕ ಪ್ರಿಯಾಂಕ ಎಂ.ಜಿ ಅವರ ಲೇಖನಗಳ ಸಂಕಲನ ‘ಕಾಲ ನಾ…!’. ಲೇಖಕಿಯ ಮಾತಿನಲ್ಲಿ, ಈ ಕೃತಿಯ ಎಲ್ಲ ಬಿಡಿ ಲೇಖನಗಳು ಕರ್ನಾಟಕದ ಸುಪ್ರಸಿದ್ಧ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತೆ ಕೆಲವು ನನ್ನ ವಿಶೇಷ ಉಪನ್ಯಾಸದ ತಿರುಳನ್ನು ಲೇಖನದ ರೂಪದಲ್ಲಿ ಬರೆದು ಸೇರಿಸಲಾಗಿದೆ. ಹೆಸರಿಸುವುದಾದರೆ, "ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ರಾಷ್ಟ್ರೀಕರಣದ ಅಗತ್ಯ"- ಈ ಕರೋನಾ ಕಾಲದಲ್ಲಿ ನಾವೆಲ್ಲರೂ ಎದುರಿಸುತ್ತಿರುವ ಸಮಸ್ಯೆಯೆಂದರೆ ಅದುವೇ ಆರೋಗ್ಯ ಈ ಸಂದರ್ಭದಲ್ಲಿ ಅನೇಕ ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡ ಕಾರಣ, ಪೋಷಕರು ದುಬಾರಿ ಶಿಕ್ಷಣವನ್ನು ಕೊಡಿಸಲಾಗದೆ, ಮಕ್ಕಳನ್ನು ಶಿಕ್ಷಣದಿಂದಲೇ ದೂರವಿಡುತ್ತಿದ್ದಾರೆ. ಹಾಗಾಗಿ ಈ ಎರಡೂ ಕ್ಷೇತ್ರಗಳನ್ನು ರಾಷ್ಟ್ರೀಕರಣಗೊಳಿಸ ಬೇಕಿರುವ ಅಗತ್ಯತೆಯ ಬಗ್ಗೆ ಸವಿವರವಾಗಿ ಇಲ್ಲಿ ಚರ್ಚೆ ಮಾಡಲಾಗಿದೆ. ಮತ್ತೊಂದು ವಿಶೇಷವಾದ ಲೇಖನ... "ಪ್ರಭುತ್ವದ ಸುಲಿಗೆ, ರೈತರ ಹೋರಾಟ: ತೇಜಸ್ವಿಯ ವಿಚಾರಗಳು, ನಮ್ಮ ಅನ್ನದಾತ ಬಹು ಕಾಲದಿಂದ ವಂಚಿತನಾಗಿಯೇ ಇದ್ದಾನೆ. ಅವನ ಪರವಾಗಿ ಈ ಲೇಖನದಲ್ಲಿ ಧ್ವನಿ ಎತ್ತಿದೆ. ಮತ್ತೊಂದು ಅಂಕಣ “ಬದುಕಿನಲ್ಲಿ ಭರವಸೆಯೆಂಬ ಜೀವಾಮೃತ" ಇಂದಿನ ಪೀಳಿಗೆ ಬದುಕಿನಲ್ಲಿ ಭರವಸೆಯೇ ಇಲ್ಲದೆ ಬದುಕುತ್ತಿದ್ದಾರೆ. ಅಂತಹವರಿಗೆ ಭರವಸೆಯೆಂಬ ಬೆಳಕು ಚೆಲ್ಲುವ ಕಾರ್ಯ ಈ ಅಂಕಣ ಮಾಡುತ್ತದೆ. ಹೀಗೆ ಈ ಕೃತಿಯಲ್ಲಿ ನನ್ನ ಅನೇಕ ವರ್ಷಗಳ ಸಂಶೋಧನೆ ಮತ್ತು ಅನುಭವದ ಜ್ಞಾನಬುತ್ತಿಯನ್ನು ಇಲ್ಲಿ ಅಂಕಣಗಳ ಮತ್ತು ಲೇಖನಗಳ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಒಟ್ಟಿನಲ್ಲಿ ಈ ಕೃತಿಯಲ್ಲಿ ಅವಶ್ಯವಾಗಿ ಬದುಕಿಗೆ ಬೇಕಿರುವ ಅಂತಹ ಎಲ್ಲಾ ವಿಚಾರಗಳನ್ನು ಪ್ರಸ್ತುತತೆಯ ಲೇಪ ಹಚ್ಚಿ ನನ್ನ ಪ್ರಿಯ ಓದುಗ ಮಿತ್ರರಿಗೆ ಉಣಬಡಿಸಿದ್ದೇನೆ. ಈ ರಸದೌತಣವನ್ನು ನೀವೆಲ್ಲರು ಪ್ರೀತಿಯಿಂದ ಸಿಎಯುವಿರಿ ಎಂದು ಆಶಿಸುತ್ತೇನೆ ಎಂಬುದಾಗಿ ಬರೆದಿದ್ದಾರೆ. ಬಾ.ಹ.ರಮಾಕುಮಾರಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ಕೃತಿ ಪರಿವಿಡಿಯಲ್ಲಿ ಪ್ರಭುತ್ವದ ಸುಲಿಗೆ, ರೈತರ ಹೋರಾಟ”:ತೇಜಸ್ವಿಯ ವಿಚಾರಗಳು-1, ಅಂಬೇಡ್ಕರ್ ಎಂಬ ಸಂವಿಧಾನ ಶಿಲ್ಪಿಯ ಶಿಲ್ಪಿ ರಮಾಬಾಯಿ, ಕನ್ನಡದ ಚಾರ್ಲಿ ಚಾಪ್ಲಿನ್, ಹಾಸ್ಯ ಮುಕುಟ ಬೀಚಿ, ಬದುಕಿನಲ್ಲಿ ಭರವಸೆಯೆಂಬ ಜೀವಾಮೃತ, ಕರೋನಾ ಕಾಲದಲ್ಲಿ ಸಾಹಿತ್ಯವೆಂಬ ಮಾಂತ್ರಿಕ, ಭಾರತ ಮತ್ತು ಇನ್ನಿತರ ದೇಶಗಳ ಶಿಕ್ಷಣ ಪದ್ಧತಿ, ಮಕ್ಕಳ ಆನ್‌ಲೈನ್ ಸುರಕ್ಷಿತೆಗೆ ಸಂಜೀವಿನಿಯಾದ ಆ್ಯಪ್‌ಗಳು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ರಾಷ್ಟ್ರೀಕರಣದ ಅಗತ್ಯ, ರವೀಂದ್ರನಾಥ ಟ್ಯಾಗೋರ್ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020, ಪ್ಲಾಸ್ಟಿಕ್ ಮುಕ್ತ ಪರಿಸರ ಮಾನವನ ಉದಾರ ಎಂಬ 17 ಶೀರ್ಷಿಕೆಗಳ ಬರೆಹಗಳಿವೆ.
ತುಮಕೂರಿನವರಾದ ಲೇಖಕಿ ಪ್ರಿಯಾಂಕ ಎಂ.ಜಿ 08-02-1988 ರಂದು ಜನಿಸಿದರು. A Study on Purport and Expression in English Poems of Kuvempu ಎಂಬ ವಿಷಯದಲ್ಲಿ ಹಂಪಿ ವಿಶ್ವವಿದ್ಯಾಲಯದಿಮದ ಪಿಹೆಚ್ ಡಿ ಪದವಿಯನ್ನು ಪಡೆದರು. ಕೃತಿಗಳು; ಅನುಸೃಷ್ಟಿ, ಕಾಲ ನಾ..!, ಹದಿಹರೆಯದವರ ನಿತ್ಯದ ಗೊಂದಲಗಳ ಗುಟ್ಟು, ಗುಡಿಸಲಿನಲ್ಲಿ ಅರಳಿದ ಹೂವು, ಜುಂಜಪ್ಪ ಕಾವ್ಯ ಇಂಗ್ಲಿಷ್ ಗೆ ಅನುವಾದ(ಅಪ್ರಕಟಿತ) . ...
READ MORE