ಜಗಲಿಯಿಂದ ಜಗತ್ತು ನಾಗತಿಹಳ್ಳಿ ಚಂದ್ರಶೇಖರ ಕೃತಿಯಾಗಿದೆ. ಅಲೆಮಾರಿತನವು ಬಹುಮುಖ್ಯವಾದ ಒಂದು ಜೀವನ ಮೌಲ್ಯ. ಸ್ಥಾವರದ ಅಳಿವು ಮೀರಲು ಯತ್ನಿಸುವ ಒಂದು ಜಂಗಮ ಸ್ಥಿತಿ. ತಿರುಗಾಟ ಬರಿಯ ವ್ಯಸನವಲ್ಲ. ತಿರುಗುತ್ತಲೇ ಒಳ-ಹೊರಗಣ್ಣಿನಿಂದ ಸೂಕ್ಷ್ಮವಾಗಿ ಗ್ರಹಿಸುವ ಧ್ಯಾನ ಸ್ಥಿತಿ, ಲೋಕಾನುಭವವು ಮನುಷ್ಯರ ಅನುಭವದ ದಿಗಂತಗಳನ್ನು ವಿಸ್ತರಿಸುತ್ತದೆ. ಅಕ್ಷಾಂಶ-ರೇಖಾಂಶಗಳ ಮೇಲೆ ಜಾರುಗುಪ್ಪೆ ಆಡಿಸುತ್ತದೆ. ಬಹು ಎತ್ತರದಿಂದ, ಎತ್ತರವಾಗಿ ಯೋಚಿಸಲು ಕಲಿಸುತ್ತದೆ. ಸುಳ್ಳು ಗಡಿಗಳನ್ನು ದಾಟಿ, ಕೃತಕ ಬೇಲಿಗಳನ್ನು ಕಿತ್ತೊಗೆದು ಒಂದೇ ಭೂಮಿ, ಒಬ್ಬನೇ ಮನುಷ್ಯ ಎಂಬ ದಾರ್ಶನಿಕತೆಯನ್ನು ಬೋಧಿಸುತ್ತದೆ. ಸೂಕ್ಷ್ಮ ಒಳನೋಟ ಉಳ್ಳ ಪ್ರವಾಸಿಯ ಅನುಭವ ಲೋಕ ಅತ್ಯಂತ ಶ್ರೀಮಂತವಾದುದು. ಇದು ಒಂದೇ ಕಡೆ ನೆಲೆ ನಿಂತು ಗಳಿಸುವ ಸಾಮ್ರಾಜ್ಯ ಸಿರಿಗಿಂತ ಘನವಾದ ಸಂಪತ್ತು. ನಾನು ಬೆರಗಿನಿಂದ ಕಂಡ ಮನುಷ್ಯರು, ನೀರು, ಭೂಮಿ ಮತ್ತು ಆಕಾಶಗಳೆಂಬ ಸಂಪತ್ತನ್ನು ಇಲ್ಲಿ ಇರಿಸಿದ್ದೇನೆ. ಓದುಗರ ಅನುಭವ ಕೋಶವು ಶ್ರೀಮಂತವಾಗಲೆಂದು ಆಶಿಸಿ ಈ ಸಂಪತ್ತನ್ನು ಸಂಕೋಚ ಮತ್ತು ವಿನಯದಿಂದ ಹಂಚಿಕೊಂಡಿದ್ದೇನೆ ನಾಗತಿಹಳ್ಳಿ ಚಂದ್ರಶೇಖರ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...
READ MOREhttps://www.prajavani.net/artculture/book-review/jagulliyalli-jagattu-kattikoduva-book-review-1026347.html- ಪ್ರಜಾವಾಣಿ