ಹೊಸಬೆಳಕು

Author : ಲಕ್ಷ್ಮೀ ಮಚ್ಚಿನ

Pages 123

₹ 35.00




Year of Publication: 2009
Published by: ಜನಜಾಗೃತಿ ವೇದಿಕೆ
Address: ಬೆಳ್ತಂಗಡಿ

Synopsys

ಲೇಖಕ ಲಕ್ಷ್ಮೀ ಮಚ್ಚಿನ ಅವರ ಕೃತಿ ‘ಹೊಸಬೆಳಕು’. ಮದ್ಯಪಾನ ವ್ಯಸನದ ಸಹವಾಸ ಒಮ್ಮೆ ಆದರೆ, ಪ್ರವಾಹದಲ್ಲಿ ಸೆಳೆದುಕೊಂಡು ಹೋಗುವ ವಸ್ತುವಿನಂತೆ, ದುಶ್ಚಟಕ್ಕೊಳಗಾದ ವ್ಯಕ್ತಿ ಕೂಡಾ ಮದ್ಯಪಾನವೆಂಬ ಸೆಳೆತಕ್ಕೆ ಒಳಪಡುತ್ತಾನೆ. ಜನಜಾಗೃತಿ ವೇದಿಕೆ ಎಂಬ ಸಂಘಟನೆಯು ಕಳೆದ 17 ವರ್ಷಗಳಿಂದ ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಅಲ್ಲದೆ, ಏಳು ದಿನಗಳ ಮದ್ಯವರ್ಜನ ಶಿಬಿರಗಳನ್ನು ಡಿಸಿ, ಮದ್ಯವ್ಯಸನಿಗಳ ಮನ ಒಲಿಸಿ, ಅವರಲ್ಲಿ ಆತ್ಮಸ್ಥೆರ್ಯವನ್ನು ಮೂಡಿಸಿ, ಮದ್ಯಪಾನದ ತಿರಸ್ಕಾರ ಭಾವನೆ ಬರುವಂತೆ ಮಾಡಿ, ಮುಂದೆ ಯಾವುದೇ ಸಂದರ್ಭದಲ್ಲಿಯೂ ಮದ್ಯಪಾನದ ಸಹವಾಸ ಬೇಡ ಎನ್ನುವ ದೃಢಸಂಕಲ್ಪ ಮಾಡುವಂತೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ. ಜಾಗೃತಿ ವೇದಿಕೆಯ ಕಾರ್ಯಕರ್ತರ ನಿಷ್ಠಾವಂತ ಸೇವೆಯ ಸಮಗ್ರ ಮಾಹಿತಿಯೊಂದಿಗೆ ಸಬೆಳಕು" ಎಂಬ ಕೃತಿಯನ್ನು ಪ್ರಕಟಿಸುತ್ತಿದ್ದೇವೆ. ’ಉದಯವಾಣಿ’ಯ ವರದಿಗಾರರಾದ ಲಕ್ಷ್ಮೀ ರ ಅವರು ಮದ್ಯವ್ಯಸನ ಮುಕ್ತರ ಯಶೋಗಾಥೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ.

About the Author

ಲಕ್ಷ್ಮೀ ಮಚ್ಚಿನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...

READ MORE

Related Books