‘ಹೆಜ್ಜೆ ಮೂಡಿದ ಹಾದಿ’ ಕೃತಿಯು ಸಾಹಿತ್ಯಮಾಲಿಕೆಯ ಲೇಖನಗಳ ಸಂಕಲನವಾಗಿದೆ. ಕೃತಿಯ ಕೆಲವೊಂದು ವಿಚಾರಗಳು ಬೆನ್ನುಡಿಯಲ್ಲಿ “ಸಾಹಿತ್ಯದ ಮುಖಾಂತರ ನಾವು ಮೊದಲಿನಿಂದಲೂ ತೊಡಗಿಸಿಕೊಂಡದ್ದು ಮನುಷ್ಯರಾಗಿ ಅರಳುವ ಪ್ರಕ್ರಿಯೆಯಲ್ಲಿ ಎನ್ನುವ ನಂಬಿಕೆ ನನ್ನದು. ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವುಗಳಾಗಿವೆ. ಸಾಹಿತ್ಯ ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ” ಇದು ಯಶವಂತ ಚಿತ್ತಾಲರು ಸಾಹಿತ್ಯದ ಮಹತ್ವವನ್ನು ಕುರಿತು ಹೇಳಿದ ಮಾತು. ನಿಜಕ್ಕೂ ಕೆಲವು ಮೌಲಿಕ ಸಂಗತಿಗಳನ್ನು ನಾವು ಸಾಹಿತ್ಯದಿಂದಲೇ ಪಡೆಯಲು ಸಾಧ್ಯ. ಹೀಗಾಗಿ ಸಾಹಿತ್ಯವೆನ್ನುವುದು ಮನುಷ್ಯತ್ವವನ್ನು ಅರಳಿಸುವ ಒಂದು ಸೃಜನಶೀಲ ಸೃಷ್ಟಿ. ಓದು ಮತ್ತು ಬರವಣಿಗೆಯ ಮೂಲಕ ನಾನು ಬೇರೆಯವರಿಗೆ ಏನನ್ನು ಹೇಳುತ್ತಿದ್ದೇನೆ ಎನ್ನುವುದಕ್ಕಿಂತ ಈ ಒಂದು ಸೃಜನಶೀಲ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ನಾನು ಏನನ್ನು ಪಡೆಯುತ್ತಿರುವೆ ಎನ್ನುವ ಪ್ರಶ್ನೆ ನನ್ನಲ್ಲಿ ಸದಾಕಾಲ ಜಾಗೃತವಾಗಿರುತ್ತದೆ’ ಎಂದು ವಿಶ್ಲೇಷಿಸಿದ್ದಾರೆ.
ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ) ...
READ MORE