‘ಹರಿವ ನದಿಗೆ ನೂರು ಕಾಲು’ ಕೃತಿಯು ರಾಜಕುಮಾರ ವಿ ಕುಲಕರ್ಣಿ ಅವರ ಲೇಖನಗಳ ಸಂಕಲನವಾಗಿದೆ ಕೃತಿಯ ಬೆನ್ನುಡಿಯಲ್ಲಿರುವ ಕೆಲವೊಂದು ವಿಚಾರಗಳು ಹೀಗಿವೆ: ಬ್ಲೇಕ್ ತನ್ನ ಬರವಣಿಗೆಯನ್ನು ಕುರಿತು ಹೀಗೆ ಹೇಳುತ್ತಾನೆ. 'ಇದು ನನ್ನದು ಆದರೆ ನನ್ನದು ಮಾತ್ರವಲ್ಲ'. ತನ್ನ ಬರವಣಿಗೆಯ ಕೃಷಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದವರನ್ನು ಬ್ಲೇಕ್ ನೆನಪಿಸಿಕೊಳ್ಳುವ ರೀತಿ ಇದು. ಏಕೆಂದರೆ ಕಥೆ, ಕಾವ್ಯ, ಕಾದಂಬರಿ ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಸೃಷ್ಟಿಯ ಹಿಂದೆ ಅವನಿಗರಿವಿದ್ದೂ ಇಲ್ಲದೆಯೋ ಅನೇಕ ಪಾತ್ರಗಳು ಆ ಸೃಜನಶೀಲ ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತವೆ. ಲೇಖಕನಾದವನ್ನು ನೋಡಿದ, ಕೇಳಿದ ಘಟನೆಗಳಿಗೆ ತನ್ನ ಕಲ್ಪನೆಯನ್ನು ಸೇರಿಸಿ ಕಥೆಯನ್ನೋ, ಕಾದಂಬರಿಯನ್ನೋ ಬರೆಯುತ್ತಾನೆ. ಹೀಗೆ ಬರೆದದ್ದು ಲೇಖಕನ ಸೃಜನಶೀಲ ಸೃಷ್ಟಿಯಾದರೂ ಆ ಪ್ರಕ್ರಿಯೆಗೆ ಸ್ಫೂರ್ತಿ ನೀಡಿದ ಪಾತ್ರಗಳು ಹಲವು ಎನ್ನುವುದನ್ನು ಪ್ರತಿಯೊಬ್ಬ ಬರಹಗಾರ ಒಪ್ಪಿಕೊಳ್ಳುತ್ತಾನೆ. ಕುವೆಂಪು ಅವರ ಹೂವಯ್ಯ, ಕಾರಂತರ ಚೋಮ, ಚಿತ್ತಾಲರ ನಾಗಪ್ಪ, ಭೈರಪ್ಪನವರ ವಿಶ್ವನಾಥ ಹೀಗೆ ಈ ಎಲ್ಲ ಪಾತ್ರಗಳ ರಚನೆಯ ಹಿಂದೆ ನಿರ್ದಿಷ್ಟ ಪಾತ್ರಗಳ ಭಾವವಿದೆ. ಈ ಅನುಭವ ಓದುಗರದೂ ಹೌದು, ಕೆಲವೊಮ್ಮೆ ಕೃತಿಯೊಂದನ್ನು ಓದುತ್ತಿರುವ ಚಳಿಗೆ ಅದರಲ್ಲಿನ ಸನ್ನಿವೇಶ ಇಲ್ಲವೇ ಪಾತ್ರವನ್ನು ಎಲ್ಲೋ ನೋಡಿದ ಮತ್ತು ಅದಕ್ಕೆ ಸಾಕ್ಷಿಯಾದ ಅನುಭವ ಧುತ್ತೆಂದು ಎದುರಾಗುವುದುಂಟು. ಹೀಗೆ ಲೇಖಕ ಓದುಗರನ್ನು ಅವರು ಬದುಕುತ್ತಿರುವ ಪರಿಸರಕ್ಕೆ ಸದಾಕಾಲ ಮುಖಾಮುಖಿಯಾಗಿಸುತ್ತಲೇ ಹೋಗುತ್ತಾನೆ. ಏಕೆಂದರೆ, ಲೇಖಕನ ಸೃಜನಶೀಲ ಸೃಷ್ಟಿ ಕೂಡ ತಾನು ಬದುಕುತ್ತಿರುವ ಪರಿಸರದಿಂದಲೇ ಎತ್ತಿಕೊಂಡ ಅನುಭವದ ಏಳಿಗೆ ಕಲ್ಪನೆಯ ಎರಕ ಹೊಯ್ದ ಕಲಾಸೃಷ್ಟಿ ತಾನೆ, ಅದರಿಂದ, ಲೇಖಕನಾಗಲಿ ಮತ್ತು ಓದುಗನಾಗಲಿ ಈ ಕಲಾಸೃಷ್ಟಿಯಿಂದ ದೊರೆತ ಅನುಭವವನ್ನು ತನ್ನದು ಮಾತ್ರವೆಂದು ಬೀಗದೆ ಬ್ಲೇಕ್ ನಂತೆ ‘ಇದು ನನ್ನದು ಆದರೆ ನನ್ನದು ಮಾತ್ರವಲ್ಲ’ ಎನ್ನುವ ಔದಾರ್ಯವನ್ನು ಮರೆಯಬೇಕು” ಎಂದು ವಿಶ್ಲೇಷಿತವಾಗಿದೆ.
ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ) ...
READ MORE