ಚಿತ್ರಕಲಾ ಶಿಕ್ಷಕ ವೃತ್ತಿಯ ಮಧ್ಯೆಯೂ ಡಿ.ಎನ್. ಅಕ್ಕಿ ಅವರು ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸುತ್ತಾ ಜನಪದ, ಇತಿಹಾಸ, ಧಾರ್ಮಿಕ, ವ್ಯಕ್ತಿಚಿತ್ರಗಳೆಡೆಗೆ ದೃಷ್ಟಿ ಹರಿಸಿ ಅವುಗಳಿಗೆ ಅಕ್ಷರ ರೂಪ ನೀಡಿದ ಚೌಕಟ್ಟು ’ ಹಕ್ಕಲು ತೆನೆ’ ಆಗಿದೆ. 2011ರಲ್ಲಿ ಮೊದಲ ಮುದ್ರಣ ಕಂಡಿದೆ. ಬದುಕಿನ ಬಗೆಗೆ ಲೇಖಕರಿಗಿರುವ ಕಳಕಳಿಯನ್ನು ಅತ್ಯಂತ ಸಮರ್ಥನೀಯವಾಗಿ ಇಲ್ಲಿಯ ಲೇಖನಗಳು ಬಿಂಬಿಸುತ್ತವೆ. ಇತಿಹಾಸ ತಜ್ಞ ಡಾ. ಎಚ್.ಎಸ್.ಗೋಪಾಲರಾವ್ ಮುನ್ನುಡಿ ಬರೆದಿದ್ದು, ’ ಲೇಖನಗಳ ವೈಶಿಷ್ಟ್ಯವೆಂದರೆ, ಪ್ರತಿ ಪದವನ್ನೂ ಸಹ ತೂಗಿ ಬರೆದಿದ್ದು ಗಮನ ಸೆಳೆಯುತ್ತದೆ. ಬರಹವನ್ನು ಡಿ.ಎನ್.ಅಕ್ಕಿ ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ. ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...
READ MORE