ಗಾಂಧಿ ಮುಗಿಯದ ಅಧ್ಯಾಯ

Author : ರಾಜಶೇಖರ ಮಠಪತಿ (ರಾಗಂ)

Pages 253

₹ 167.00




Year of Publication: 2019
Published by: ಕಣ್ವ ಪ್ರಕಾಶನ
Address: #777 ಗ್ರೌಂಡ್ ಪ್ಲೋರ್, 7ನೇ ಕ್ರಾಸ್, 5ನೇ ಮೈನ್, ಎಂ.ಸಿ ಲೇಔಟ್, ವಿಜಯನಗರ, ಬೆಂಗಳೂರು, ಕರ್ನಾಟಕ - 560040
Phone: 080 2342 6778

Synopsys

‘ಗಾಂಧಿ ಮುಗಿಯದ ಅಧ್ಯಾಯ’ ಕೃತಿಯು ರಾಜಶೇಖರ ಮಠಪತಿ ಅವರ ಗಾಂಧಿ ವಿಚಾರಧಾರೆಗಳ ಕುರಿತ ಲೇಖನ ಸಂಕಲನವಾಗಿದೆ. ಗಾಂಧೀಜಿ ನಡೆದು ಬಂದಂತಹ ಕಠಿಣ ಮಾರ್ಗದ ಸವಿಸ್ತಾರವಾದ ಮಾಹಿತಿಯನ್ನು ಕೃತಿಯಲ್ಲಿ ಲೇಖಕ ಕಟ್ಟಿಕೊಟ್ಟಿದ್ದಾರೆ. ಪೀಳಿಗೆಗೆ ಉಪಯುಕ್ತ ಸಂಗತಿಗಳು ಇದರಲ್ಲಿವೆ. ಗಾಂಧಿ ಬದುಕಿನ ಅನೇಕ ವಿಷಯಗಳ ಮೇಲೆ ಈ ಕೃತಿಯು ಬೆಳಕು ಚೆಲ್ಲಿದೆ. ಕೃತಿಗೆ ಬೆನ್ನುಡಿ ಬರೆದಿರುವ ಗಿರಡ್ಡಿ ಗೋವಿಂದರಾಜ ಅವರು, ಗಾಂಧಿಯ ಬದುಕನ್ನು ನಿರೂಪಿಸುವ ರೀತಿಯಲ್ಲಿ ಮಠಪತಿಯವರೇ ಆದ ಒಂದು ವಿಶಿಷ್ಟ ದೃಷ್ಟಿಕೋನವಿರುವುದು ಈ ಕೃತಿಯ ಹೆಗ್ಗಳಿಕೆ. ಗಾಂಧಿಯೊಂದಿಗೆ ಒಂದಾಗುತ್ತಾ, ಆತನ ಗೊಂದಲ, ಅಸಹಾಯಕತೆ, ಹೊಯ್ದಾಟಗಳನ್ನು ಸ್ವಂತವೆಂಬಂತೆ ಅವರು ಅನುಭವಿಸಿ ಬರೆದಿದ್ದಾರೆ. ಹಾಗೆಯೇ, ಅವನಿಂದ ಬೇರೆಯಾಗುತ್ತಾ ಅವನ ದೌರ್ಬಲ್ಯಗಳನ್ನೂ ಕೂಡ ಕಾಣಿಸಿದ್ದಾರೆ. ಜೀವನ ಚರಿತ್ರೆಯಾದರೂ ಒಂದು ಆತ್ಮಕಥೆಯಂತೆ, ಕಾದಂಬರಿಯಂತೆ ಈ ಕೃತಿ ಓದಿಸಿಕೊಳ್ಳುತ್ತದೆ. ಗಾಂಧಿಯನ್ನು ಕುರಿತು ಹಲವಾರು ಗ್ರಂಥಗಳು ರಚನೆಯಾಗಿದ್ದರೂ ಮಠಪತಿಯವರ ಈ ಕೃತಿ ತನ್ನದೇ ಆದ ವೈಶಿಷ್ಟ್ಯ ಪಡೆದುಕೊಂಡಿದೆ ಎಂದಿದ್ದಾರೆ.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books