ಲೇಖಕ ಗುರುಪ್ರಸಾದ್ ಕುರ್ತಕೋಟಿ ಅವರು ಸಂಪಾದಿಸಿದ ಕೃತಿ-ಎಲ್ಲರಂಥವನಲ್ಲ ನನ್ನಪ್ಪ. ಅಪ್ಪನ ಕುರಿತು ಬರೆದ ವಿವಿಧ ಬರಹಗಳ ಸಂಗ್ರಹವಿದು. ತಾಯಿಯನ್ನು ಗೌರವಿಸುವ, ಆರಾಧಿಸುವ ಬಗ್ಗೆ ಎಲ್ಲೆಡೆಯೂ ಮಾತುಗಳು ಕೇಳಿ ಬರುತ್ತವೆ. ಜನಮಾನಸದಲ್ಲಿ ತಂದೆಗಿಂತ ತಾಯಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಆದರೆ, ಅಪ್ಪನಿಗೂ ತಾಯಿಯಷ್ಟೇ ಸ್ಥಾನಮಾನವಿದೆ ಎಂಬ ಚಿಂತನೆಗಳ ಬರಹಗಳನ್ನು ಇಲ್ಲಿ ಸಂಗ್ರಹಿಸಿದ್ದು, ಅಪ್ಪನ ಮಹತ್ವದ ಸ್ಥಾನವನ್ನು ಮನವರಿಕೆ ಮಾಡುವ ಪ್ರಯತ್ನದ ಕಳಕಳಿಯು ಕೃತಿಯ ಉದ್ದೇಶ.
ಲೇಖಕ ಗುರುಪ್ರಸಾದ ಕುರ್ತಕೋಟಿ ಅವರು ಹುಟ್ಟಿದ್ದು ಗದಗಿನಲ್ಲಿ. ಬೆಳೆದಿದ್ದು ಲಕ್ಷ್ಮೇಶ್ವರ. ಮುಂದೆ ಎಂಜಿನಿಯರಿಂಗ್ ಅಭ್ಯಸಿಸಿ, software ಉದ್ಯಮದಲ್ಲಿ ತೊಡಗಿಸಿಕೊಂಡು ಸುಮಾರು ಎರಡು ದಶಕಗಳ ಕಾಲ ಹಲವು ದೊಡ್ಡ ಕಂಪನಿಗಳಲ್ಲಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಮೆರಿಕೆಯಲ್ಲಿಯೂ ಕೆಲವು ವರ್ಷ ಕೆಲಸ ಮಾಡಿ, ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೊದಲಿನಿಂದಲೂ ಓದು ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಹಲವಾರು ನಗೆ ಬರಹಗಳು, ಲಲಿತ ಪ್ರಬಂಧಗಳು ಹಾಗೂ ಕತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟ ಆಗಿವೆ. ಅವರು ಸಂಪಾದಿಸಿದ್ದ "ಎಲ್ಲರಂಥವನಲ್ಲ ನನ್ನಪ್ಪ" ಹಾಗೂ "ಅಪ್ಪರೂಪ" ಪುಸ್ತಕಗಳು ಓದುಗರಿಂದ ಪ್ರಶಂಸೆಗೆ ಪಾತ್ರವಾಗಿವೆ. "ಕೇಶಕ್ಷಾಮ" ಅವರ ಮೂರನೆಯ ಕೃತಿ. ಕೃಷಿಯ ...
READ MORE