ಲೇಖಕ ಗುರುಪ್ರಸಾದ ಕುರ್ತಕೋಟಿ ಅವರು ಹುಟ್ಟಿದ್ದು ಗದಗಿನಲ್ಲಿ. ಬೆಳೆದಿದ್ದು ಲಕ್ಷ್ಮೇಶ್ವರ. ಮುಂದೆ ಎಂಜಿನಿಯರಿಂಗ್ ಅಭ್ಯಸಿಸಿ, software ಉದ್ಯಮದಲ್ಲಿ ತೊಡಗಿಸಿಕೊಂಡು ಸುಮಾರು ಎರಡು ದಶಕಗಳ ಕಾಲ ಹಲವು ದೊಡ್ಡ ಕಂಪನಿಗಳಲ್ಲಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಮೆರಿಕೆಯಲ್ಲಿಯೂ ಕೆಲವು ವರ್ಷ ಕೆಲಸ ಮಾಡಿ, ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಮೊದಲಿನಿಂದಲೂ ಓದು ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಹಲವಾರು ನಗೆ ಬರಹಗಳು, ಲಲಿತ ಪ್ರಬಂಧಗಳು ಹಾಗೂ ಕತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟ ಆಗಿವೆ. ಅವರು ಸಂಪಾದಿಸಿದ್ದ "ಎಲ್ಲರಂಥವನಲ್ಲ ನನ್ನಪ್ಪ" ಹಾಗೂ "ಅಪ್ಪರೂಪ" ಪುಸ್ತಕಗಳು ಓದುಗರಿಂದ ಪ್ರಶಂಸೆಗೆ ಪಾತ್ರವಾಗಿವೆ. "ಕೇಶಕ್ಷಾಮ" ಅವರ ಮೂರನೆಯ ಕೃತಿ.
ಕೃಷಿಯ ಬಗ್ಗೆಯೂ ಅಪಾರ ಒಲವಿದ್ದ ಅವರು ಕೆಲ ವರ್ಷಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೃಷಿಯನ್ನು ಅಪ್ಪಿಕೊಂಡಿದ್ದಾರೆ. ಅವರು ತಮ್ಮನ್ನು ತಾವು "ರೈತರು ಹಾಗೂ ರೈಟರ್ರು" ಅಂತ ತಮಾಷೆಯಾಗಿ ಹೇಳಿಕೊಳ್ಳುತ್ತಾರೆ. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಕಟ್ಟಿ ಮಣ್ಣು ರಹಿತ / Hydroponics ಕೃಷಿಯ ಬಗ್ಗೆ ತರಬೇತಿಯನ್ನೂ ನೀಡುತ್ತಿದ್ದಾರೆ.