ಎಲ್ಲ ಎಲ್ಲೆಗಳ ದಾಟಿ-ಮಹಾದೇವ ಬಸರಕೋಡ ಅವರ ಬರಹಗಳ ಸಂಕಲನ. ಮನುಷ್ಯನ ಮನಸ್ಸು ತುಂಬ ವಿಸ್ಮಯಕಾರಿ. ಪ್ರಕೃತಿಯಲ್ಲಿರುವ ಸೌಂದರ್ಯ ಮತ್ತು ಕರಾಳತೆ ಮನುಷ್ಯ ಮನಸ್ಸಿನಲ್ಲಿಯೂ ಅಪ್ಪಳಿಸುತ್ತಲೇ ಇರುತ್ತದೆ. ಮನುಜನ ಸುರೂಪದ ಹಲವು ಆಯಾಮಗಳ ಧನಾತ್ಮಕ ಸುಮಗಳಿಂದ ಅಲಂಕೃತಗೊಂಡ ಸುವಿಚಾರಗಳು ಬಾಳ ಹಾದಿಗೆ ದಾರಿದೀಪವಾಗಿ ತೋರುತ್ತವೆ. ಜೀವಪ್ರೀತಿಗಾಗಿ ತುಡಿಯುತ್ತವೆ. 'ಲೇಸೆ ಕೇಳಿಸಲಿ ಕಿವಿಗೆ, ನಾಲಿಗೆಗೆ ಲೇಸೆ ನುಡಿದು ಬರಲಿ, ಲೇಸೆ ಕಾಣಿಸಲಿ ಕಣ್ಗೆ' ಎಂಬ ವರಕವಿ ಬೇಂದ್ರೆ ಅವರ ಮಾತಿನಂತೆ ಜೀವದೊಲವಿನ ಧ್ಯಾನಸ್ಥ ಬರಹಗಳ ಒಡಲದನಿಯಾಗಿ ಇಲ್ಲಿನ ಲೇಖನಗಳು ಇಲ್ಲಿ ಮೂಡಿ ಬಂದಿವೆ. ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟಗೊಂಡ ವಿಶಿಷ್ಠ ಬರಹಗಳ ಸಂಗ್ರಹವಿದು.
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE