ಕಮ್ಯುನಿಸ್ಟ್ ಪಕ್ಷದ ಹೊಸ ಸದಸ್ಯರಿಗೆ ಕಮ್ಯುನಿಸಂ ಕುರಿತು ಅರಿವು ನೀಡುವುದಕ್ಕೆ ಏರ್ಪಡಿಸಲಾಗಿದ್ದ ಶಿಬಿರಗಳಲ್ಲಿ ಕೇವಲ ಒಂದು ವಿಷಯ ಸೂಚಿಯಾಗಿ ನೆರವಾಗುವುದಕ್ಕೆಂದು ಈ ಪುಸ್ತಕವನ್ನು 1954ರಲ್ಲಿ ಹೊರತರಲಾಯಿತು.
ಕೆಲವು ವಾಸ್ತವಾಂಶಗಳನ್ನು ಮಾತ್ರ ಸಮಕಾಲೀನವಾಗಿ ಬದಲಾವಣೆ ಮಾಡಿ ದ್ವಿತೀಯ ಆವೃತ್ತಿಯನ್ನು 1978ರಲ್ಲಿ ಪ್ರಕಟಿಸಲಾದ ಈ ಪುಸ್ತಕ ಕಮ್ಯುನಿಸಂ ಬಗೆಗೆ ಸಂಕ್ಷಿಪ್ತ ಮಾಹಿತಿ ಒದಗಿಸುತ್ತದೆ. ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನರ ಚಿಂತನೆಯ ಫಲವಾದ ಕಮ್ಯುನಿಸಂ ಕಡೆಗೊಂದು ಸಣ್ಣ ಇಣುಕು ನೋಟ ಬೀರುತ್ತದೆ.
ಬಿ.ವಿ. ಕಕ್ಕಿಲ್ಲಾಯರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರು. ಉತ್ತರ ಕೇರಳದ ಕಾಸರಗೋಡು ತಾಲೂಕಿನ ಚೆರ್ಕಳದ ಸಮೀಪ, ಪಯಸ್ವಿನಿ ನದಿಯ ದಂಡೆಯ ಮೇಲಿರುವ ಬೇವಿಂಜೆಯಲ್ಲಿ ಶ್ರೀಮಂತ ಭೂಮಾಲಕರಾಗಿದ್ದ ವಿಷ್ಣು ಕಕ್ಕಿಲ್ಲಾಯರ ಕೊನೆಯ ಮಗನಾಗಿ ಏಪ್ರಿಲ್ 9, 1919 ರಂದು ಬಿ. ವಿ ಕಕ್ಕಿಲ್ಲಾಯ ಜನಿಸಿದರು. ಕಾಸರಗೋಡಿನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದ ಬಳಿಕ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜನ್ನು ಸೇರಿದ ಬಿ ವಿ ಕಕ್ಕಿಲ್ಲಾಯರು ಆ ಕಾಲದಲ್ಲಿ ಉತ್ತುಂಗದಲ್ಲಿದ್ದ ಭಾರತದ ಸ್ವಾತಂತ್ರ್ಯ ...
READ MORE