ಹಾಸ್ಯ ಪ್ರವೃತ್ತಿಯಿಂದಲೇ ಪ್ರಸಿದ್ದಿಯಾದ ಎಚ್.ಡುಂಡಿರಾಜ್ ಅವರ ಪ್ರಕಟಿತ ಕೃತಿ ’ಬೋಳಾಯ ತಸ್ಮೈ ನಮಃ’.
ಲಘು ಲೇಖನಗಳಿಂದ ಕೂಡಿದ ಈ ಕೃತಿಯು ಹಾಸ್ಯವೆಂದರೆ, ಗಣನಾಯಕ v/s ಬಣನಾಯಕ, ಓಡುವ ನದಿ ಸಾಗರವ ಸೇರಲೇಬೇಕು, ಬೋಳಾಯ ತಸ್ಮೈ ನಮಃ, ರತಿ ಲೀಲೆಗೆ ಋತು ಭೇದವಿಲ್ಲ, ಏನಾದರೂ ಮಾಡುವವರು, ಮಾತು ಮತ್ತು ಮುತ್ತು, ಭ್ರಷ್ಟಾಚಾರವೇ ಸ್ವರ್ಗ, ಹೊಸ ಸಂವತ್ಸರ – ಆಹ್ಲಾದ ’ಖರ’, ಅಂಥಿಂಥ ಮಂತ್ರಿ ಇವನಲ್ಲ, ರಾಮ ನವಮಿಯಲ್ಲ ಟ್ರಾಫಿಕ್ ಜಾಮ್ ನವಮಿ, ಕರ ಹಂತಕನ ನರೇಂದ್ರಜಾಲ, ಬೆಲೆ ಏರಿಕೆಯ ಬಿಸಿ, ಕೋಪವೆಂಬುದು ಕೇಳು, ಕಾರ್ನಾಡ ಹಬ್ಬ , ಭ್ರಷ್ಟಾಚಾರ ಅತ್ಯಾಚಾರ, ನಿತ್ಯಾಚಾರ, ಪಿಕ್ ಪಾಕೆಟ್ ಪ್ರಸಂಗ, ಧೋನಿ ಆಡಲಿ ಬ್ಯಾಟು ಬೀಸಲಿ, ಕತ್ತೆ ಮತ್ತು ಕಪ್ಪೆ ಕತೆ, ಸನ್ಮಾನ ಎಂಬ ಕಾಯಿಲೆ ಮುಂತಾದ ಲಘು ಲೇಖನಗಳನ್ನು ಒಳಗೊಂಡಿದೆ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE