ಚಿತ್ರಕಲಾವಿದ, ನಾಟಕಕಾರ, ಬರಹಗಾರರಾದ ಪಿ. ಆರ್ ಆಚಾರ್ಯ ( ಆರ್ಯ) ಅವರು ’ಬಣ್ಣದ ಕಣ್ಣು’ ಕೃತಿಯ ಮೂಲಕ ಭಾರತೀಯ ಹಾಗೂ ಪಾಶ್ಚಾತ್ಯ ಚಿತ್ರಕಲೆಯ ಅಪರೂಪದ ಪಠ್ಯಗಳು ಹಾಗೂ ಪ್ರಯೋಗಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆರ್ಯರು ಧ್ಯಾನಿಸಿಕೊಂಡು ಬಂದ ಕಲಾ ಸಮಾಜದ ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳ ಕುರಿತ ಚಿಂತನೆಗಳ ಕುರಿತಾದ ಲೇಖನಗಳು ಕೃತಿಯಲ್ಲಿವೆ.
ಆರ್ಯರ ಸಾಹಿತ್ಯ ಹಾಗೂ ಚಿತ್ರಕಲೆಗಳನ್ನು ತಿಳಿಯಲು ಅಗತ್ಯವಾದ ಪೂರಕ ಮಾಹಿತಿಗಳನ್ನು ’ಬಣ್ಣದ ಕಣ್ಣು’ ಕೃತಿ ನೀಡಿದೆ. ಇಲ್ಲಿರುವ ಅನೇಕ ಲೇಖನಗಳು ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ವಿಜ್ಞಾನ, ತತ್ವ್ತಜ್ಞಾನ, ಚರಿತ್ರೆ ಮೊದಲಾದ ಹಲವು ಕ್ಷೇತ್ರಗಳ ಬಗ್ಗೆ ಕುರಿತಾದ ಪ್ರಬುದ್ಧ ಮನಸ್ಸಿನ ಆಲೋಚನೆಗಳಾಗಿವೆ. ಇಂತಹ ಅನೇಕ ವಿಷಯಗಳನ್ನೊಳಗೊಂಡ ಚಿಂತನಾ ಬರಹಗಳನ್ನು ಆರ್ಯರು 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ’ಸಾಂಗತ್ಯ’ ಹೆಸರಿನ ಅಂಕಣದಲ್ಲಿ ಬರೆಯುತ್ತಿದ್ದರು. ಅವರ ’ಸಾಂಗತ್ಯ’ದ ಬರಹಗಳು ಹಾಗೂ ಕೆಲವು ಸಾಂದರ್ಭಿಕ ಲೇಖನಗಳು ಸೇರಿ ’ಬಣ್ಣದ ಕಣ್ಣು’ ಪುಸ್ತಕ ರೂಪ ಪಡೆದುಕೊಂಡಿದೆ.
’ಆರ್ಯ’ ಎಂಬ ಹೆಸರಿನಿಂದ ಸಾಹಿತ್ಯ ಕೃತಿ ರಚಿಸಿದ ಪಿ. ಆರ್. ಆಚಾರ್ಯ ಅವರು ಚಿತ್ರಕಲಾವಿದ, ನಾಟಕಕಾರರೂ ಆಗಿದ್ದರು. 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯ ಅವರ ತಂದೆ ವಿಠಲಾಚಾರ್ಯ ಮತ್ತು ತಾಯಿ ರುಕ್ಮಿಣಿ. ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆರ್ಯ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ (ಸಂಸ್ಕೃತ) ಪದವಿ ಪಡೆದಿದ್ದರು. 1963ರಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು. 1973 ರಲ್ಲಿ ಸನ್ಯಾಸತ್ವ ಬಿಡುವುದರ ಜೊತೆಗೆ ಮಠದ ವ್ಯವಸ್ಥೆಯಿಂದ ಹೊರಬಂದ ಆರ್ಯ ಅವರು ಸಿಂಡಿಕೇಟ್ ...
READ MORE