‘ಬಾಗ್ ಬಹುದುರ್ ನ ಸಾವು’ ಲೇಖಕ ಬಂಜಗೆರೆ ಜಯಪ್ರಕಾಶ್ ಅವರ ಲೇಖನ ಸಂಕಲನ. ಕಳೆದ ಎರಡು ಮೂರು ವರ್ಷಗಳಲ್ಲಿ ಬರೆದ ಕೆಲವು ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ನಮ್ಮ ಸಮಕಾಲೀನ ದೃಷ್ಟಿಕೋನ ಹಾಗೂ ಸೂಕ್ಷ್ಮ ಗ್ರಹಿಕೆಗಳಿಂದ ಕೂಡಿವೆ. ಬಹುಪಾಲು ಲೇಖನಗಳು ಪ್ರಖರ ಬೌದ್ಧಿಕತೆಯ ನಡುವೆಯೂ ವೈಯಕ್ತಿಕ ಅನುಭವಗಳ ನೆಲೆಯಲ್ಲಿ ಕಥನಗಳಂತೆ ಚೇತೋಹಾರಿಯಾಗಿ ನಿರೂಪಿತವಾಗಿರುವುದೊಂದು ವೈಶಿಷ್ಟ, ಕನ್ನಡದ ಸಂಸ್ಕೃತಿ ಚಿಂತನೆಗೆ ಈ ಸಂಕಲನವೊಂದು ಮೌಲಿಕ ಸೇರ್ಪಡೆ.
ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹುಟ್ಟಿದ್ದು ಜೂನ್ 17-1965ರಲ್ಲಿ. ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ ಇರುವ ಬಂಜಗೆರೆ ಜಯಪ್ರಕಾಶ್ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೋಕಿನ ಬಂಜಗೆರೆಯವರು. ಹೊನ್ನಾರು ಸಾಹಿತ್ಯ ಮಾಸ ಪತ್ರಿಕೆಯ ಗೌರವ ಸಂಪಾದಕ. ಹಲವಾರು ಪತ್ರಿಕೆಗಳ ಅಂಕಣ ಬರಹಗಾರರಾಗಿದ್ದರು. ಚಳ್ಳಕೆರೆ ಚಿತ್ರದುರ್ಗಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ. 1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. 1987 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)ಪದವಿ. ಕಳೆದ ...
READ MORE