ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹುಟ್ಟಿದ್ದು ಜೂನ್ 17-1965ರಲ್ಲಿ. ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ ಇರುವ ಬಂಜಗೆರೆ ಜಯಪ್ರಕಾಶ್ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೋಕಿನ ಬಂಜಗೆರೆಯವರು.
ಚಳ್ಳಕೆರೆ ಚಿತ್ರದುರ್ಗಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ. 1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. 1987 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)ಪದವಿ. ಕಳೆದ ಎರಡು ಮೂರು ದಶಕಗಳಿಂದ ಜನಪರ ಚಳುವಳಿಗಳಲ್ಲಿ ಸಕ್ರಿಯ ಪಾತ್ರ. ಕನ್ನಡ ವಿಶ್ವವಿದ್ಯಾಲಯವು ಆರಂಭಿಸಿರುವ ದೇಸಿ ಸಂಸ್ಕೃತಿ ಅಧ್ಯಯನ ಮಂಡಲಿ ಸದಸ್ಯರಾಗಿ, 2005ರಿಂದ 2008ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಣೆ. ಇವರ ಇಂಗ್ಲಿಷ್ ಅನುವಾದಿತ ಕೃತಿ ‘ಪಾಪ ನಿವೇದನೆ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ರ ಪುಸ್ತಕ ಪ್ರಶಸ್ತಿ ಬಂದಿದೆ. ಹೊನ್ನಾರು ಸಾಹಿತ್ಯ ಮಾಸ ಪತ್ರಿಕೆಯ ಗೌರವ ಸಂಪಾದಕ. ಹಲವಾರು ಪತ್ರಿಕೆಗಳ ಅಂಕಣ ಬರಹಗಾರ.
ಪ್ರಸ್ತುತ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ನೆಲೆಸಿರುವ ಇವರು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆದಿಮ ಬುಡಕಟ್ಟು ಸಮುದಾಯಗಳ ಅಧ್ಯಯನ ಯೋಜನೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಂಜಗೆರೆ ಜಯಪ್ರಕಾಶರ ಕೃತಿಗಳು;
ಕವನ ಸಂಕಲನಗಳು
ಪದಾರ್ಪಣ(1983), ಮಹೂವಾ(1992), ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು(1998), ಕಳೆದ ಕಾಲದ ಪ್ರೇಯಸಿಯರಿಗೆ (ಸಂಯುಕ್ತ ಸಂಕಲನ-2001)
ಲೇಖನ ಸಂಗ್ರಹ
ಬಾಗ್ ಬಹಾದುರ್ ನ ಸಾವು(2003), ಉಲಿಯ ಉಯ್ಯಲೆ(2005), ನಿಲ-ವರ್ತಮಾನ ಮುಖಾಬಿಲೆ(ಲೇಖನಗಳು-2009), ಪಿಳ್ಳಂಗೋವಿ(ಲೇಖನಗಳು ಮತ್ತು ಮುನ್ನುಡಿಗಳು)-2009
ಸಂಸ್ಕೃತಿ ಅಧ್ಯಯನ ಕೃತಿಗಳು
ಇದೇ ರಾಮಾಯಣ (ವಾಲ್ಮೀಕಿ ರಾಮಾಯಣದ ಸಾಂಸ್ಕೃತಿಕ ವಿಶ್ಲೇಷಣೆ-1994,
ಕನ್ನಡ ರಾಷ್ಟ್ರೀಯತೆ(ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳ ರಾಜಕೀಯಾರ್ಥಿಕ ಅಧ್ಯಯನ). ಡಿ.ಲಿಟ್ ಮಹಾಪ್ರಬಂಧ-2000,
ಕರ್ನಾಟಕತ್ವ ಸಮಾಜೋ ಆರ್ಥಿಕ ತಳಹದಿ-2006,
ಆನು ದೇವಾ ಹೊರಗಣವನು(ಬಸವಣ್ಣ ಜಾತಿ ಮೂಲದ ವಿಶ್ಲೇಷಣೆ) ಕರ್ನಾಟಕ ಸರ್ಕಾರದಿಂದ ಮುಟ್ಟುಗೋಲಿಗೆ ಒಳಗಾದ ಕೃತಿ- 2007,
ವಸಂತ ಮೇಘ ಘರ್ಜನೆ (ವಿವಿಧ ಭಾರತೀಯ ಕ್ರಾಂತಿಕಾರಿ ಕವಿತೆಗಳು)-1990,
ಲಾಲ್ ಬನೋ ಗುಲಾಮಿ ಛೋಡೋ ಬೋಲೋ ವಂದೇ ಮಾತರಂ(ಎನ್ಕೆಯವರ ತೆಲುಗು ಖಂಡಕಾವ್ಯ)-1991,
ಮತ್ತೊಂದು ಪ್ರಸ್ಥಾನ (ಶ್ರೀ ಶ್ರೀ ತೆಲುಗು ಕವಿತೆಗಳು)- 1991,
ಸಮುದ್ರ ಮತ್ತು ಇತರ ಕವಿತೆಗಳು(ವರವರರಾವ್ ಆಯ್ದ ತೆಲುಗು ಕವಿತೆಗಳು-1995,
ಅಗೆತವಿಲ್ಲದ ತೋಟಗಾರಿಕೆ( ಸಹಜ ತೋಟಗಾರಿಕೆಯಲ್ಲೊಂದು ಪ್ರಯೋಗ-ಎ.ಗೆಸ್ಟ್ ಇಂಗ್ಲಿಷ್ ಕೃತಿ)-1996,
ಪ್ರವಾದಿ-(ಖಲೀಲ್ ಗಿಬ್ರಾನ್ ದಿ ಪ್ರೊಫೆಟ್ ಇಂಗ್ಲಿಷ್ ಕೃತಿ)-1999,
ತಲೆಮಾರು(ಅಲೆಕ್ಸ್ ಹೆಲಿ ದಿ ರೂಟ್ಸ್ ಇಂಗ್ಲಿಷ್ ಕೃತಿ)-2005,
ಜಾತಿ-ರಾಷ್ಟ್ರದೊಳಗೊಂದು ರಾಷ್ಟ್ರ(ವಿ.ಟಿ.ರಾಜಶೇಖರ್ ಇಂಗ್ಲಿಷ್ ಕೃತಿ)
ದೇಗುಲದಲ್ಲಿ ದೆವ್ವ(ಗೂಗಿ ವಾ ಥಿಯಾಂಗೊ ಅವರ ಡೆವಿಲ್ ಆನ್ ದ ಕ್ರಾಸ್ ಇಂಗ್ಲಿಷ್ ಕಾದಂಬರಿ)-2007
ಪಾಪ ನಿವೇದನೆ( ಜಾನ್ ಪೆರ್ಕಿನ್ಸ್ ಕನ್ಫೆಶನ್ಸ್ ಆಫ್ ಆ್ಯನ್ ಎಕನಾಮಿಕ್ ಹಿಟ್ಮನ್ ಇಂಗ್ಲಿಷ್ ಕೃತಿ-2008,
ಮಧ್ಯಯುಗೀನ ಭಾರತ- ಅಂತ್ಯಜನ ತತ್ವ ಚಿಂತನೆ-( ಶಂಕರ ಮೊಕಾಶಿ ಪುಣೇಕರ್ ಅವರ Harijan contribution to medeaval india thought-2011.)