ಬೆಡಗಿನೆದುರಿನ ಬೆರಗು

Author : ಮೋಹನ ನಾಗಮ್ಮನವರ

Pages 208

₹ 100.00




Year of Publication: 2001
Published by: ಮಹಾಮನೆ ಪ್ರಕಾಶನ
Address: ನವೋದಯ ನಗರ, ಧಾರವಾಡ – 3\n
Phone: 8362446263

Synopsys

‘ಬೆಡಗಿನೆದುರಿನ ಬೆರಗು’ಮೋಹನನಾಗಮೃನವರ ಅವರ ಆಯ್ದ ಬರಹಗಳ ಸಂಕಲನವಾಗಿದೆ. ಸಂಬಂಧಗಳನ್ನು ಆತ್ಮೀಯವಾಗಿಸುವ, ಮನುಷ್ಯ -ಮನುಷ್ಯನನ್ನು ಇನ್ನಷ್ಟು ಅರ್ಥಮಾಡಿಕೊಳ್ಳುವ ಸುಂದರ ನಡೆವಳಿಕೆಗಳು ಇಂದಿನ ಜರೂರ ಅಗತ್ಯ. ಬಹಳಷ್ಟು ಜನರ ಒಡನಾಟ, ಚಿಂತನೆ ಅಗತ್ಯ ಎಂಬುದನ್ನು ಈ ಕೃತಿ ವಿವರಿಸುತ್ತದೆ

About the Author

ಮೋಹನ ನಾಗಮ್ಮನವರ
(07 October 1962 - 08 December 2018)

ಲಂಕೇಶ್ ಪತ್ರಿಕೆ ಬರಹಗಾರರಾಗಿದ್ದ ಮೋಹನ ನಾಗಮ್ಮನವರ ಅವರು 1962 ಅಕ್ಟೋಬರ್ 7ರಂದು ಧಾರವಾಡ ಜಿಲ್ಲೆಯ ಅಗಡಿಯಲ್ಲಿ ಜನಿಸಿದರು. ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಗೋಕಾಕ ಚಳವಳಿ, ದಲಿತ ಚಳವಳಿಯಲ್ಲಿ ಭಾಗವಹಿಸಿದ್ದರು. ಸರ್ಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ಇವರು ಬರೆದ ಕೃತಿಗಳೆಂದರೆ ವಿಧಾನ ಸೌಧ, ಅಗ್ರಹಾರದ ಒಂದು ಸಂಜೆ, ಮಹಾನಿರ್ಗಮನ (ಕವನ ಸಂಕಲನ), ಚಿಂತಾಮಣಿ, ಸಂಕಟಪುರದ ನಾಟಕ ಪ್ರಸಂಗ (ಕಥಾ ಸಂಕಲನ), ಬೆಡಗಿನೆದುರಿನ ಬೆರಗು, ಕಥನ ಕುತೂಹಲ, ಬಯಲ ಬೇರ ಚಿಗುರು (ಲೇಖನಗಳು) ಮುಂತಾದವು. ಮೋಹನ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ, ...

READ MORE

Reviews

ಹೊಸತು ಜುಲೈ 2002

ಸಂಬಂಧಗಳನ್ನು ಆತ್ಮೀಯವಾಗಿಸುವ, ಮನುಷ್ಯ-ಮನುಷ್ಯನನ್ನು ಇನ್ನಷ್ಟು ಅರ್ಥಮಾಡಿಕೊಳ್ಳುವ ಸುಂದರ ನಡೆವಳಿಕೆಗಳು ಇಂದಿನ ಜರೂರ ಅಗತ್ಯ. ಬಹಳಷ್ಟು ಜನರ ಒಡನಾಟ, ಚಿಂತನೆ ಅಗತ್ಯ. ಇಲ್ಲಿನ ಕೆಲವು ಲೇಖನ, ಸಂದರ್ಶನದ ಭಾಗಗಳು ಮೇಲಿನ ಉತ್ತಮ ಕಾರ್ಯಗಳು ಅಣಿಗೊಳಿಸಬಲ್ಲವು. ಮೋಹನ ನಾಗಮ್ಮನವರು ನಮಗೆಲ್ಲ ಒಂದು ಹೊಸ ಭಾಷೆ ಕಲಿಸಿದ್ದಾರೆನ್ನಬಹುದು. ಅದು ಅಕ್ಷರವಿಲ್ಲದ ಹೊಸ ಮಾನವೀಯ ಭಾಷೆ. ಕೃತಿಯ ಕೊನೆಯ ಭಾಗದಲ್ಲಿ ಕೆಲ ಪುಸ್ತಕಗಳ ಪರಿಚಯವಿದೆ.

Related Books