ಅರಿವಿನ ಹರಿಗೋಲು

Author : ಪರಮೇಶ್ವರಯ್ಯ ಸೊಪ್ಪಿಮಠ

Pages 208

₹ 225.00




Year of Publication: 2020
Published by: ಮಣಿ ಪ್ರಕಾಶನ
Address: # 560, 12ನೇ ಮುಖ್ಯರಸ್ತೆ, 20-ಬಿ-ಕ್ಲಾಸ್,ಸಿ-ಬ್ಲಾಕ್, ವಿಜಯನಗರ 3ನೇ ಹಂತ, ಮೈಸೂರು-570030
Phone: 9686535465

Synopsys

ಅರಿವಿನ ಹರಿಗೋಲು- ಶಿಕ್ಷಕ ಹಾಗೂ ಲೇಖಕ ಪರಮೇಶ್ವರಯ್ಯ ಸೊಪ್ಪಿಮಠ ಅವರ ಕೃತಿ. ಶೈಕ್ಷಣಿಕ ಲೇಖನಗಳ ಸಂಕಲನವಿದು. ಕೃತಿಗೆ ಮುನ್ನುಡಿ ಬರೆದ ಉಡುಪಿಯ ಕುಂಜಿಬೆಟ್ಟು ಡಾ.ಟಿಎಂಎ ಪೈ ಶಿಕ್ಷಣ ಕಾಲೇಜು ಸಮ್ನವಯಾಧಿಕಾರಿ ಡಾ. ಡಾ. ಮಹಾಬಲೇಶ್ವರ ರಾವ್ ‘ಸೊಪ್ಪಿಮಠ ತರಗತಿಯ ಮಾಮೂಲಿ ಶಿಕ್ಷಕರಲ್ಲ. ಸದಾ ಹೊಸತನಕ್ಕೆ ಸ್ಪಂದಿಸುವ, ವೈಚಾರಿಕತೆಯ ನೆಲೆಯಲ್ಲಿ ಯೋಚಿಸುವ ಕ್ರಿಯಾಶೀಲ, ಸೃಜನಶೀಲ ಶಿಕ್ಷಕರು. 

ಈ ಸಂಕಲನದಲ್ಲಿ ಐದು ವಿಭಾಗಗಳಲ್ಲಿ ಹಂಚಿಹೋಗಿರುವ ನಲ್ವತ್ತು ಲೇಖನಗಳಿವೆ. ಇವು ಸುಲಭ ಓದಿಗೆ ದಕ್ಕುವ ರಚನೆಗಳು. ಯಶೋಗಾಥೆ, ನಾವೀನ್ಯ, ಚಿಣ್ಣರ ಚಿತ್ತ ಕಲಿಕೆಯತ್ತ, ಪರೀಕ್ಷೆ ಗಗನ ಕುಸುಮವಲ್ಲ ಮತ್ತು ಪೋಷಕರ ಕಡೆಯಿಂದ ಎಂಬ ಐದು ವಿಭಾಗಗಳಲ್ಲಿ ಸಾಧಕರ ಬಗ್ಗೆ, ಸರಕಾರಿ ಶಾಲೆಗಳ ಬಗ್ಗೆ, ವಿದ್ಯಾರ್ಥಿಗಳು ಸಾಗಬೇಕಾದ ದಾರಿಯ ಬಗ್ಗೆ, ಪೋಷಕರ ಹೊಣೆಗಾರಿಕೆಗಳ ಬಗ್ಗೆ ಮತ್ತು ಪರೀಕ್ಷೆಗಳಲ್ಲಿ ಗೆಲುವು ಸಾಧಿಸುವ ಮಾರ್ಗೋಪಾಯಗಳ ಬಗ್ಗೆ ಕಣ್ಣು ತೆರೆಸುವ ಲೇಖನಗಳಿವೆ.

ಬರಹದ ಭಾಷೆ ತಿಳಿಯಾಗಿದೆ, ನಿರೂಪಣೆ ಸಹಜಸುಂದರವಾಗಿದೆ. ಎಲ್ಲ ಲೇಖನಗಳಲ್ಲೂ ಕೃತಿಕಾರರ ಧನಾತ್ಮಕ ಮನೋಭಾವ ಎದ್ದು ಕಾಣುತ್ತದೆ. ಓದುಗವರ್ಗಕ್ಕೆ ಅಗತ್ಯವಾದ ಸೂಕ್ತ ಮಾರ್ಗದರ್ಶಿ ಸಲಹೆ ಸೂಚನೆಗಳಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಪರಮೇಶ್ವರಯ್ಯ ಸೊಪ್ಪಿಮಠ
(21 September 1974)

ಪರಮೇಶ್ವರಯ್ಯ ಸೊಪ್ಪಿಮಠ: 1974 ಸೆಪ್ಟೆಂಬರ್ 21ರಂದು ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಜನನ. ಪ್ರಾಥಮಿಕದಿಂದ ಪಿ.ಯು.ವರೆಗೂ ಹ.ಬೊ.ಹಳ್ಳಿಯಲ್ಲಿ ವಿದ್ಯಾಭ್ಯಾಸ. ಶಿಕ್ಷಕ ತರಬೇತಿಯು ತುಮಕೂರಿನ ಸಿದ್ಧಗಂಗಾಮಠದಲ್ಲಿ ಆಯಿತು. ತದನಂತರ ದೂರಶಿಕ್ಷಣದ ಮುಖಾಂತರ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಬಿ.ಎ ಪದವಿ ಹಾಗೂ ಎಂ.ಎ. (ಕನ್ನಡ) ಸ್ನಾತಕೋತ್ತರ ಶಿಕ್ಷಣ. ಎಂ.ಎ. (ಪತ್ರಿಕೋದ್ಯಮ) ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ವಿ.ವಿ. ಹಂಪಿಯಲ್ಲಿ ಅಭ್ಯಾಸ. ಪ್ರಸ್ತುತ ಕನ್ನಡ ವಿ.ವಿ. ಹಂಪಿಯ ಕನ್ನಡ ಅಧ್ಯಯನ ವಿಭಾಗದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ” ವಿಷಯದ ಮೇಲೆ ಪಿಹೆಚ್.ಡಿ. ಅಧ್ಯಯನ. 1998ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರ್ಪಡೆ. ಶಿಕ್ಷಕಿ ವನಿತಾರೊಂದಿಗೆ ...

READ MORE

Related Books