ಪರಮೇಶ್ವರಯ್ಯ ಸೊಪ್ಪಿಮಠ: 1974 ಸೆಪ್ಟೆಂಬರ್ 21ರಂದು ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಜನನ. ಪ್ರಾಥಮಿಕದಿಂದ ಪಿ.ಯು.ವರೆಗೂ ಹ.ಬೊ.ಹಳ್ಳಿಯಲ್ಲಿ ವಿದ್ಯಾಭ್ಯಾಸ. ಶಿಕ್ಷಕ ತರಬೇತಿಯು ತುಮಕೂರಿನ ಸಿದ್ಧಗಂಗಾಮಠದಲ್ಲಿ ಆಯಿತು. ತದನಂತರ ದೂರಶಿಕ್ಷಣದ ಮುಖಾಂತರ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಬಿ.ಎ ಪದವಿ ಹಾಗೂ ಎಂ.ಎ. (ಕನ್ನಡ) ಸ್ನಾತಕೋತ್ತರ ಶಿಕ್ಷಣ. ಎಂ.ಎ. (ಪತ್ರಿಕೋದ್ಯಮ) ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ವಿ.ವಿ. ಹಂಪಿಯಲ್ಲಿ ಅಭ್ಯಾಸ. ಪ್ರಸ್ತುತ ಕನ್ನಡ ವಿ.ವಿ. ಹಂಪಿಯ ಕನ್ನಡ ಅಧ್ಯಯನ ವಿಭಾಗದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ” ವಿಷಯದ ಮೇಲೆ ಪಿಹೆಚ್.ಡಿ. ಅಧ್ಯಯನ. 1998ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರ್ಪಡೆ. ಶಿಕ್ಷಕಿ ವನಿತಾರೊಂದಿಗೆ 2002ರಲ್ಲಿ ವಿವಾಹ. ಅನು ಮತ್ತು ನೇಹಾ ಇಬ್ಬರು ಮಕ್ಕಳು. ಶಿಕ್ಷಕನಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಪ್ರಸ್ತುತ ಮಾಲವಿಯ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಣೆ. ಶೈಕ್ಷಣಿಕ, ಸಾಹಿತ್ಯ, ಸಮಾಜಸೇವೆ ಮತ್ತು ಸಂಘಟನೆಗಳಲ್ಲಿ ಆಸಕ್ತಿ. ಓದುವ ಮತ್ತು ಬರವಣಿಗೆ ಹವ್ಯಾಸ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ತರಬೇತಿ, ಧಾರವಾಡ ಪರ್ಯಾಯ ಕೃಷಿ ಮಾದ್ಯಮ ಕೇಂದ್ರದಲ್ಲಿ ಕೃಷಿ ಪತ್ರಿಕೋದ್ಯಮ ಕುರಿತು ಕ್ಯಾಮ್‍ಫೆಲೋ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕಾವ್ಯರಚನಾ ಕಮ್ಮಟದಲ್ಲಿ ತರಬೇತಿ. 700ಕ್ಕೂ ಹೆಚ್ಚು ಲೇಖನಗಳು ರಾಜ್ಯದ ಎಲ್ಲಾ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅಂದರೆ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ವಿಜಯವಾಣಿ, ದಿಕ್ಸೂಚಿ, ಕರ್ಮವೀರ, ಹೊಸತು, ಬಾಲವಿಜ್ಞಾನ, ಕನ್ನಡ ಪ್ರಭ, ಸುಧಾ, ವಿಜ್ಞಾನ ಸಂಗಾತಿ, ಟೀಚರ್, ಸ್ವಪ್ನ ಲೋಕ, ಬಸವ ಪಥ, ಗುಬ್ಬಚ್ಚಿ ಗೂಡು, ಜೀವನ ಶಿಕ್ಷಣ, ಜನಪದ, ಜೀವನ ವಿಕಾಸ, ಶಿಕ್ಷಣ ವಾರ್ತೆ, ಸಮಾಜಮುಖಿ ಸೇರಿದಂತ ವಿವಿಧ ಪತ್ರಿಕೆಗಳಲ್ಲಿ ವ್ಯಕ್ತಿ-ಪರಿಚಯ, ಮಕ್ಕಳು, ವಿಜ್ಞಾನ, ಶಿಕ್ಷಣ, ಆರೋಗ್ಯ, ಸಂಸ್ಕøತಿ, ಐತಿಹಾಸಿಕ, ಮಹಿಳೆ, ಕೃಷಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಲೇಖನಗಳು ಪ್ರಕಟ. ಗುಲ್ಬರ್ಗಾ ವಿಶ್ವ ವಿದ್ಯಾಲಯದ ದ್ವಿತೀಯ ಬಿ.ಎಸ್.ಸಿ. ಕನ್ನಡ ಪಠ್ಯವಾದ ವೈಜ್ಞಾನಿಕ ಪ್ರಬಂಧಗಳು ಪುಸ್ತಕದಲ್ಲಿ ‘ಎಜುಸ್ಯಾಟ್- ಒಂದು ಶಿಕ್ಷಣ ಕ್ರಾಂತಿ’ ಲೇಖನವನ್ನು ವಿದ್ಯಾರ್ಥಿಗಳು 2005ನೇ ಸಾಲಿನಿಂದ ಅಭ್ಯಾಸ, “ರವೀಂದ್ರನಾಥ್ ಟ್ಯಾಗೋರ್” ಲೇಖನ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ 6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿತ್ತು. ಬರೆದ ಕೃತಿಗಳು ‘ಹಗರಿಬೊಮ್ಮನಹಳ್ಳಿ ತಾಲೂಕು ದರ್ಶನ’, ‘ತರಗತಿ ನಿರ್ವಹಣ ತಂತ್ರಗಳು’, ‘ತಿಳಿವಿನ ತುತ್ತು’, ‘ಅರಿವ ಸಾರಿದ ಎಂ.ವಿ.ಚಕ್ರಪಾಣ’Â, ‘ಅಕ್ಕ ಮಹಾದೇವಿ ಕಂಡಂತೆ ಬಸವಣ್ಣ’, ‘ಎಂ.ಪಿ.ಪ್ರಕಾಶ್’, ‘ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು’, ‘ಎಣೆಯಿಲ್ಲದಾಗಸಕೆ’ ಕೃತಿಗಳು ಪ್ರಕಟವಾಗಿವೆ. ‘ಶಿಕ್ಷಣ ವಿಕಾಸ-2009’ ಮತ್ತು ‘ನಮ್ಮ ಮಕ್ಕಳು’ ಸಂಪಾದಿತ ಕೃತಿಗಳು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ, ಗಣಿತ ಪಠ್ಯಪುಸ್ತಕ ಮತ್ತು ಅಭ್ಯಾಸ ಪುಸ್ತಕ ರಚನಾ ಸಮಿತಿ ಸದಸ್ಯ, ಬಾಲಕಿಯರ ಸಬಲೀಕರಣದ ಮೀನಾ ಸಾಹಿತ್ಯ ರಚನೆ, ರೇಡಿಯೋ ಪಾಠಗಳ ರಚನೆ, ಹಂಪಿ ಉತ್ಸವದಲ್ಲಿ ನಿರೂಪಕನಾಗಿ, ಆಕಾಶವಾಣಿಗಳಲ್ಲಿ ಚಿಂತನ, ಸಂವಾದ, ನೇರ ಫೊನ್ ಇನ್, ಉಪನ್ಯಾಸಕನಾಗಿ ಹೀಗೆ ಹಲವಾರು ಕಡೆ ತೊಡುಗುವಿಕೆ. ಜೆ.ಸಿ. ಬೆಂಗಳೂರು ಅವರ ರಾಜ್ಯ ಗುರು ಪುರಸ್ಕಾರ, ಗುಲ್ಬರ್ಗದ ಉದಯೋನ್ಮುಖ ಬರಹಗಾರರ ಸಂಘ ಉದಯೋನ್ಮುಖ ಬರಹಗಾರ, 2006-07 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ಬೆಳಗಾವಿಯ ಸ.ಜ. ನಾಗಲೋಟಿಮಠ ಅಂತರಾಷ್ಟ್ರೀಯ ಪ್ರತಿಷ್ಠಾನದ ರಾಜ್ಯ ಆದರ್ಶ ಶಿಕ್ಷಕ, ರಾಯಚೂರು ವಿಜ್ಞಾನ ಕೇಂದ್ರದಿಂದ ಉತ್ತಮ ಶಿಕ್ಷಕ, ಧಾರವಾಡದ ಗುಬ್ಬಚ್ಚಿಗೂಡು ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಶಿಕ್ಷಣ ಸಿರಿ, ಜನನಿ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಇನ್ನು ಹಲವಾರು ಪ್ರಶಸ್ತಿ ಜೊತೆಗೆ ಸಂಘ-ಸಂಸ್ಥೆಗಳ ಗೌರವ-ಸನ್ಮಾನಗಳಿಗೆ ಭಾಜನ.