ಆರದಿರಲಿ ಬೆಳಕು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಅಂಕಣ ಬರಹ ಸುಲಭವಲ್ಲ ಪ್ರಚಲಿತ ವಿದ್ಯಮಾನಗಳ ಕುರಿತ ಅರಿವು ರಾಜಕೀಯ, ಕಲೆ ಸಂಸ್ಕೃತಿಗಳೊಟ್ಟಿಗೆ ರೋಚಕತೆಯ ಒಗ್ಗರಣೆಯಾಗಬೇಕು, ಮುಖ್ಯವಾಗಿ ಸಾಮಾಜಿಕ ಕಳಕಳಿರಬೇಕು, ಅದರಲ್ಲಿ ಬರೆಹಗಾರರ ವ್ಯಕ್ತಿತ್ವ, ಅಭಿರುಚಿಗಳು ಸಲ ಮೂಡಿರುತ್ತದೆ, 'ದೇಶ ಸುತ್ತಿ ನೋಡು, ಕೋಶ ಓದಿ ನೋಡು' ಎಂಬಂತೆ ಲೇಖಕರು ಎಲ್ಲದರಲ್ಲೂ ಪಾರಂಗತರಾಗಿರಬೇಕು. ಗದ್ಯಪದ್ಯ ಬರಹ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಈಗಾಗಲೇ ತಮ್ಮನ್ನು ಗುರ್ತಿಸಿಕೊಂಡ ಮಹಾದೇವ ಬಸರಕೋಡ ಆರದಿರಲಿ ಬೆಳಕು' ಬಹುಪಾಲು ಅಂಕಣಗಳನ್ನು ಒಳಗೊಂಡ ಕೃತಿ. ಸದಾಶಯದ 40 ಚದುರಿದ ಚಿಂತನೆಗಳು ಇಲ್ಲಿವೆ, ಇತ್ಯಾತ್ಮಕ ವಿಚಾರ ಆತ್ಮ ವಿಮರ್ಶೆ ಎಳೆಯರಿಗೆ ನೀಡುವ ಬೋಧೆ ಇಲ್ಲಿ ಎದ್ದು ಕಾಣುತ್ತವೆ, ವಚನ, ಜನಪದ, ಝೆನ್ ಸಾಹಿತ್ಯ, ಕಾವ್ಯ ಪುರಾಣ, ಸೂಫಿ ಸಾಹಿತ್ಯ ಇವನ್ನು ಲೇಖಕರು ಚೆನ್ನಾಗಿ ಅಭ್ಯಸಿಸಿದ್ದು, ತಮ್ಮ ವಿಚಾರಗಳಿಗೆ ಪೂರಕವಾಗಿ ಬಳಸಿಕೊಂಡಿರುವುದು ಸ್ವಾಗತಾರ್ಹ. ಸಾವತೆಯ ಸರಳ ಬದುಕನ್ನು ಪ್ರತಿಪಾದಿಸಲಾಗಿದೆ, "ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ’ ಎಂಬ ಮಾತಿಗೆ ಇಲ್ಲಿಯ ಬರಹಗಳು ನಿದರ್ಶನವಾಗಿವೆ ಎಂದು ಕಮಲಾ ಹೆಮ್ಮಿಗೆ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE