ಸಂಸ್ಕೃತಿ ಸಂಶೋಧಕ ಶಂ.ಬಾ. ಜೋಶಿ, ಚಿಂತಕರಾದ ಪ್ರೊ. ವಿ.ಎಂ. ಇನಾಂದಾರ ಹಾಗೂ ವಿ.ಕೆ. ಹೋಳಕಟ್ಟಿ ಸಂಯುಕ್ತವಾಗಿ ಪ್ರಕಟಿಸಿದ ಕೃತಿ-ಅಭಿನವ ಸಾಹಿತ್ಯ ಪ್ರವೇಶ, ಭಾಗ-1. ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ರಚಿಸಲಾದ ಈ ಕೃತಿಯಲ್ಲಿ ಜನಾಂಗ, ಸಮಾಜ, ಸಂಸ್ಕೃತಿ, ಸಾಹಿತ್ಯ ಹೀಗೆ ವಿವಿಧ ಮಗ್ಗಲುಗಳಲ್ಲಿ ಅಧ್ಯಯನಕ್ಕೆ ಪೂರಕವಾದ ಸಾಹಿತ್ಯವನ್ನು ಸಂಗ್ರಹಿಸಿ ನೀಡಲಾಗಿದೆ.
ಕೃತಿಯಲ್ಲಿ ಪ್ರಾರ್ಥನೆಯ ಹಿರಿಮೆ (ಗಾಂಧೀಜಿ), ಕನ್ನಡ ಭಾಗ್ಯಶ್ರೀ ಬಸವನಾಳರು (ಸ.ಸ.ಮಾಳವಾಡ), ಬಣ್ಣದ ಬುಗ್ಗೆ (ಬಸವರಾಜ ಕಟ್ಟೀಮನಿ), ಸಾಹಿತ್ಯದ ಪುನರುಜ್ಜೀವನ (ಬಿ.ಎಂ. ಶ್ರೀ), ರೈಲ್ವೆ ನಿಲ್ದಾಣ (ಆನಂದ ಕಂದ), ಬಾಳುವ ಹದ (ಶಂ.ಬಾ.ಜೋಶಿ), ಲವಕುಶ( ಶಿವರಾಮ ಕಾರಂತ), ಹೀಗೆ 24ಕ್ಕೂ ಅಧಿಕ ಲೇಖನಗಳು, ಮತ್ತು ವಿವಿಧ ಮಹಾನುಭಾವರ ಜೀವನ ಚರಿತ್ರೆಗಳು, ವಿವಿಧ ಪ್ರದೇಶಗಳ ಜನಜೀವನ ಮತ್ತು ಸಂಸ್ಕೃತಿ, ಭಾಷೆ-ಕಥೆ ಕುರಿತಂತೆ ಸಾಹಿತ್ಯ ಮತ್ತು ಶೈಲಿ ಹೀಗೆ ವಿದ್ವತ್ ಪೂರ್ಣವಾದ ಲೇಖನಗಳನ್ನು ಕೃತಿಯಲ್ಲಿ ಸಂಕಲಿಸಲಾಗಿದೆ.
ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...
READ MORE