‘ವಿಶಿಷ್ಟ ಲೇಖನಗಳು’ ವಿ.ಗಣೇಶ್ ಅವರ ಲೇಖನಗಳಾಗಿವೆ. ಗಣೇಶ್ರವರು ಕೇವಲ ಉತ್ತಮ ಬರಹಗಾರರು ಮಾತ್ರವಲ್ಲ ಉತ್ತಮ ವ್ಯಕ್ತಿ ಕೂಡ. ಅವರು ಸ್ನೇಹ ಎಂಬ ಪದಕ್ಕೆ ಮತ್ತೊಂದು ಹೆಸರು. ಒಮ್ಮೆ ಒಬ್ಬರ ಪರಿಚಯ ಆಯಿತು ಎಂದರೆ ಅವರ ಆಪ್ತವಲಯಕ್ಕೆ ಸೇರಿದಂತೆ. ಅವರ ನಿರಂತರ ಸಂಪರ್ಕ ಹಾಗೇ ಉಳಿಸಿಕೊಳ್ಳುವ ಸ್ನೇಹಪರತೆ ಅವರದು. ಇದಕ್ಕೆ ಕಾರಣ ಅವರು ಎಲ್ಲರಲ್ಲೂ ನೋಡಬಯಸುವ ಮತ್ತು ಹೇಳಬಯಸುವ ಒಳ್ಳೆಯಗುಣ ಹಾಗೂ ಅದನ್ನು ಮೆಚ್ಚಿ ಬಾಯ್ತುಂಬ, ಉತ್ಸಾಹ, ಸಂತೋಷದಿಂದ ಮತ್ತೊಬ್ಬರಲ್ಲಿ ಹಂಚಿಕೊಂಡು ತನ್ನ ಮತ್ತು ಅವರ ಜ್ಞಾನವಿಕಾಸಕ್ಕೆ ಕಾರಣವಾಗುವ ಪ್ರಾಂಜಲ ಮನಸ್ಸು.
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE