`ವಿಚಾರಭಾರತಿ’ ಶ್ರೀನಿವಾಸ ಜೋಕಟ್ಟೆ ಅವರ ಸಂಪಾದನೆಯ ಕೃತಿಯಾಗಿದೆ. 'ವಿಚಾರ ಸಾಹಿತ್ಯ'ದ ಸಮ್ಮೇಳನಗಳನ್ನು ನಡೆಸಿದ್ದಲ್ಲದೇ ಆ ಸಮಾರಂಭಗಳ ಅಧ್ಯಕ್ಷರ ಭಾಷಣಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಮೆಚ್ಚಬೇಕಾದ ಸಂಗತಿ. ಇಲ್ಲಿನ ಏಳು ಲೇಖನಗಳು ಹಲವು ಸಾಮಾಜಿಕ ಸಂಗತಿಗಳನ್ನು ಗಂಭೀರವಾಗಿ ಪರಿಶೀಲಿಸುತ್ತವೆ. ಶ್ರಮ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಬರಗೂರು ಅವರ ಪ್ರಬಂಧ ಸಮರ್ಥವಾಗಿ ತಿಳಿಸುತ್ತದೆ.
ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. ...
READ MOREಹೊಸತು- ಅಕ್ಟೋಬರ್-2005
'ವಿಚಾರ ಸಾಹಿತ್ಯ'ದ ಸಮ್ಮೇಳನಗಳನ್ನು ನಡೆಸಿದ್ದಲ್ಲದೇ ಆ ಸಮಾರಂಭಗಳ ಅಧ್ಯಕ್ಷರ ಭಾಷಣಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಮೆಚ್ಚಬೇಕಾದ ಸಂಗತಿ. ಇಲ್ಲಿನ ಏಳು ಲೇಖನಗಳು ಹಲವು ಸಾಮಾಜಿಕ ಸಂಗತಿಗಳನ್ನು ಗಂಭೀರವಾಗಿ ಪರಿಶೀಲಿಸುತ್ತವೆ. ಶ್ರಮ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಬರಗೂರು ಅವರ ಪ್ರಬಂಧ ಸಮರ್ಥವಾಗಿ ತಿಳಿಸುತ್ತದೆ. ಭಯೋತ್ಪಾದನೆಯ ಹಲವು 'ಅವ್ಯಕ್ತ ಮುಖಗಳನ್ನು ಜಿ. ಆರ್. ಅವರು ಸರಿಯಾಗಿ ಗುರುತಿಸಿದ್ದಾರೆ. ಜಾಗತೀಕರಣ ಜಾನಪದ, ವೈಚಾರಿಕತೆಯ ಸೃಜನಶೀಲ ಗುಣದ ಬಗ್ಗೆ ಮೂರು ಬರಹಗಳಿವೆ. ಸಿದ್ಧಲಿಂಗಯ್ಯ ಹಾಗೂ ಚಂದ್ರಶೇಖರ ಪಾಟೀಲ ಅವರ ಲೇಖನಗಳು ಆತ್ಮೀಯ ಶೈಲಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತವೆ.