ವಚನ ಸಂಸ್ಕೃತಿ

Author : ಬಸವರಾಜ ಸಬರದ

Pages 304

₹ 240.00




Year of Publication: 2006
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರ್ಗಿ

Synopsys

‘ವಚನ ಸಂಸ್ಕೃತಿ’ ಲೇಖಕ ಡಾ. ಬಸವರಾಜ ಸಬರದ ಅವರ ಲೇಖನ ಸಂಕಲನ. ಈಕೃತಿಗೆ ಲೇಖಕ ರಂಜಾನ್ ದರ್ಗಾ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ವಚನ ಸಂಸ್ಕೃತಿ ಸಕಲ ಜೀವಪರ ಸಂಸ್ಕೃತಿಯಾಗಿದೆ. ಹೀಗಾಗಿ ಅದು ಸರ್ವಸಮತ್ವದ ಸಂಸ್ಕೃತಿಯಾಗಿದೆ. ಸಾಮಾಜಿಕ ಜವಾಬ್ದಾರಿಯೊಂದಿಗಿನ ವ್ಯಕ್ತಿ ಸ್ವಾತಂತ್ರ್ಯ ವಚನ ಸಂಸ್ಕೃತಿಯ ಜೀವಾಳವಾಗಿದೆ. ಇಂಥ ಸಂಸ್ಕೃತಿಯ ಪರಿಕಲ್ಪನೆಯೊಂದಿಗೆ ಜಾತಿ ಸಂಕರದಿಂದ ಕೂಡಿದ ಶರಣ ಸಂಕುಲವನ್ನು ಸೃಷ್ಟಿಸಿದ್ದು ಬಸವಣ್ಣನವರ ಸಾಧನೆಯಾಗಿದೆ. ತುಳಿತಕ್ಕೊಳಗಾದ ಜನರ ಬಗೆಗೆ ಅಪಾರ ಕಾಳಜಿಯುಳ್ಳ ಪ್ರಿಯ ಮಿತ್ರ ಬಸವರಾಜ ಸಬರದ ಅವರು, ವಚನಕಾರರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ವಚನ ಸಂಸ್ಕೃತಿಯಲ್ಲಿ ಹಿಡಿದಿಡುವ ಸಾಧನೆ ಮಾಡಿದ್ದಾರೆ ಎಂದು ರಂಜಾನ್ ದರ್ಗಾ ಮೆಚ್ಚುಗೆ ಸೂಚಿಸಿದ್ದಾರೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books