ವಚನ ಧರ್ಮಸಾರ ಅಧ್ಯಯನಶೀಲ ಬರಹದ ಪುಸ್ತಕವಾಗಿದ್ದು, ಲೇಖಕ ಎಂ.ಆರ್. ಶ್ರೀನಿವಾಸಮೂರ್ತಿ ಅವರು ರಚಿಸಿದ್ದಾರೆ. ಕೃತಿಯು ಮುನ್ನುಡಿ, ಪೀಠಿಕೆ, ಆಕರಗಳ ಪಟ್ಟಿ, ಅಂಕಿತಗಳ ವಿವರ, ವಚನಧರ್ಮದ ಉದಯ, ವಚನಗಳ ಪ್ರಾಶಸ್ತ್ಯ, ಪರಮವಸ್ತು ದೇವರು, ಭಕ್ತಿ ಬಸವಣ್ಣನವರು, ಜ್ಞಾನ ಚೆನ್ನಬಸವಣ್ಣ, ವೈರಾಗ್ಯ ಅಲ್ಲಮಪ್ರಭು, ಕರ್ಮಯೋಗ ಸಿದ್ಧರಾಮ, ಶರಣ ಸತಿ ಲಿಂಗ ಪತಿ ಮಹಾದೇವಿಯಕ್ಕ, ಅಷ್ಟಾವರಣಗಳು, ಪಟ್ಥಲ ಸಿದ್ಧಾಂತ, ಸಮನವ್ಯ ದೃಷ್ಟಿ, ವಚನಧರ್ಮದಲ್ಲಿ ನೀತಿ, ವಚನಕಾರರ ವಿಚಾರವಾದ, ವಚನಧರ್ಮವೂ ಸ್ತ್ರೀಯರೂ, ವಚನಧರ್ಮದಲ್ಲಿ ಸಮಾಜ ರಚನೆ, ವಚನಗಳಲ್ಲಿ ಕಾವ್ಯಲಕ್ಷಣಗಳು, ವಚನಸಂಗ್ರಹ ಅಧ್ಯಾಯಗಲನ್ನು ಈ ಕೃತಿಯು ಹೊಂದಿದೆ.
ವಿದ್ವಾಂಸರು, ಸಾಹಿತಿಗಳು, ಆಧುನಿಕ ಕನ್ನಡದ ನಿರ್ಮಾತೃಗಳಲ್ಲಿ ಒಬ್ಬರಾದ ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್ಸ್ಪೆಕ್ಟರ್ ರಾಗಿ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ 1947ರಲ್ಲಿ ನಿವೃತ್ತಿ ಪಡೆಯುತ್ತಾರೆ. ಪ್ರಚಂಡ ವಾಗ್ಮಿ, ಉತ್ತಮ ಶಿಕ್ಷಕರು, ಸಮರ್ಥ ಅಧಿಕಾರಿಯಾದ ಅವರು ಸಂಸ್ಕೃತ, ಹಳಗನ್ನಡಗಳ ಅಭ್ಯಾಸದ ಅನುಭವದಿಂದ ರಚಿಸಿದ ಕೃತಿಗಳು.. ವಿದ್ಯಾರ್ಥಿ ದೆಸೆಯಲ್ಲಿಯೇ ರಚಿಸಿದ ಕಾದಂಬರಿ ‘ಸಾವಿತ್ರಿ.’ ಸ್ಕೌಟ್ ಬಾಲಕರ ಅಭಿನಯಕ್ಕೆಂದು ರಚಿಸಿದ ನಾಟಕ ‘ಕಂಠೀರವ ವಿಜಯ.’ ’ಧರ್ಮದುರಂತ, ನಾಗರಿಕ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಮಹಾತ್ಯಾಗ ಮತ್ತೊಂದು ಕಾದಂಬರಿ. ’ರಂಗಣ್ಣನ ಕನಸಿನ ದಿನಗಳು’ ಮತ್ತೊಂದು ಕೃತಿ. ಕನ್ನಡ ...
READ MORE