ವಚನ ಕಟ್ಟಿದ ಅಲ್ಲಮ

Author : ಎನ್‌. ಬೋರಲಿಂಗಯ್ಯ

Pages 187

₹ 100.00




Year of Publication: 2005
Published by: ದಾರಿದೀಪ ಪ್ರಕಾಶನ
Address: ದಾರಿದೀಪ ಸಂಶೋಧನಾ ಕೇಂದ್ರ ಬೋಗಾದಿ ಬಡಾವಣೆ ಮೈಸೂರು- 570026

Synopsys

‘ವಚನ ಕಟ್ಟಿದ ಅಲ್ಲಮ ’ ಎನ್‌. ಬೋರಲಿಂಗಯ್ಯ ಅವರ ರಚನೆಯ ವಚನ ವಿವೇಚನೆಯಾಗಿದೆ. ಬೋರಲಿಂಗಯ್ಯನವರು ನೆಲದ ಮರೆಯ ನಿಧಾನದಂತಹವರು, ತಮ್ಮೊಳಗೆ ಬೈತಿದ್ದು ಕಾಂಡ ತೀಕವಾದ ವಿಮರ್ಶಾ ಮತ್ತು ವಿಶ್ಲೇಷಣಾ ಶಕ್ತಿಯನ್ನು ಆಗೊಮ್ಮೆ ಈಗೊಮ್ಮೆ ಮಾತ್ರ ಹರಡುವಂಥವರು, ಅವರು ಬರೆದಿದ್ದು ಕಡಿಮೆ, ಚಿಂತಿಸಿದ್ದು ಜಾಸ್ತಿ, ಕನ್ನಡ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದ ಮೇಲೆ ತಮ್ಮದೇ ಆದ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿಕೊಂಡು ಬಡಮಕ್ಕಳಿಗೆ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿದವರು. ಆಧುನಿಕರ ಅಕ್ಷರದ ಅಹಂ ಅನ್ನು ತೊರೆದು ನಮ್ಮ ಜ್ಞಾನಗ್ರಹಿಕೆಯ ನೆಲೆಗಳನ್ನು ತಮ್ಮದೇ ಅದ ನೆಲೆಯಲ್ಲಿ ಮಥಿಸುತ್ತಾ ಬಂದವರು. ಅಂಥವರಿಗೆ ಸಹಜವಾಗಿ ಸವಾಲೊಡ್ಡಿದವನು ಅಲ್ಲಮ. ಅಲ್ಲಮನನ್ನು ಅವರು ಗ್ರಹಿಸುತ್ತಿರುವುದು ''ಶೈವಪಲಭಾಷೆಯಲ್ಲಿ ಮಾತನಾಡುತ್ತಿರುವ ಒಬ್ಬ ವಿಶ್ವಮಾನವನನ್ನಾಗಿ" "ನಾನು ವೀರಶೈವ ಧರ್ಮದ ಬಗ್ಗೆ ಮಾತನಾಡುತ್ತಿದ್ದೇನೆಂದು ತಪ್ಪು ತಿಳಿಯಬಾರದು. ಹಾಗೆ ನೋಡಿದರೆ ಪ್ರಭುವೇ ವೀರಶೈವನಲ್ಲ' ಎಂಬ ತಮ್ಮ ನಿಲುವನ್ನು ಅವರು ಈ ಕೃತಿಯ ಪ್ರಾರಂಭದಲ್ಲಿಯೇ ಸ್ಪಷ್ಟಪಡಿಸಿಬಿಟ್ಟಿದ್ದಾರೆ. ಇದು ಅವರು ಅಲ್ಲಮನನ್ನು ಮುಕ್ತವಾದ ನೆಲೆಯಲ್ಲಿ ಯಾವ ಪೂರ್ವಗ್ರಹಿತವೂ ಇಲ್ಲದ ಮನಸ್ಸಿನಿಂದ ಭಾವಿಸಿರುವುದನ್ನು ಸ್ಪಷ್ಟಪಡಿಸುತ್ತದೆ. ಬೋರಲಿಂಗಯ್ಯನವರ ಈ ಕೃತಿ ಅಲ್ಲಮನನ್ನು ಅರ್ಥಮಾಡಿಕೊಳ್ಳಲು ಇನ್ನೊಂದು ಮುನ್ನಡೆ ಎಂದು ನಾನು ಭಾವಿಸಿದ್ದೇನೆ. ಶುದ್ಧಾಂಗ ಶುದ್ಧವಾಗಿ ಅಲ್ಲಮನ ವಚನಗಳನ್ನು ಆಧಾರವಾಗಿಟ್ಟುಕೊಂಡು ಅವನ ಭಾವಪ್ರಪಂಚಕ್ಕೆ ಲಗ್ಗೆ ಇಟ್ಟಿದ್ದಾರೆ. - ಲಿಂಗದೇವರು ಹಳೆಮನೆ

About the Author

ಎನ್‌. ಬೋರಲಿಂಗಯ್ಯ

ಎನ್‌. ಬೋರಲಿಂಗಯ್ಯ ಅವರು ಹಿರಿಯ ವಿಮರ್ಶಕ ಮತ್ತು ಕಾದಂಬರಿಕಾರಾಗಿದ್ದಾರೆ. ಕನ್ನಡ ಪ್ರಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದ ಅವರು ತಮ್ಮದೇ ಆದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ.  ಕೃತಿಗಳು : ಕನ್ನಡ ಸಾಹಿತ್ಯ ಸಂದರ್ಭ ಮತ್ತು ಕುವೆಂಪು, ವಚನ ಕಟ್ಟಿದ ಅಲ್ಲಮ, ನೈಮಿತ್ತಿಕ, ಕಡಿವಾಣ ...

READ MORE

Related Books