`ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು' ಲೇಖನಗಳ ಸಂಗ್ರಹ ಕೃತಿ. ಲೇಖಕ ವಿನಾಯಕ ಭಟ್, ರೋಹಿತ್ ಚಕ್ರತೀರ್ಥ ಗೀರ್ವಾಣಿ ಮತ್ತು ವೃಷಾಂಕ ಭಟ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಬಾಂಗ್ಲಾ ಹಿಂದೂಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಒಳಗೊಂಡಿದೆ. ಕರ್ನಾಟಕದ ರಾಯಚೂರಿನ ಸಿಂಧನೂರಿನಲ್ಲಿ ಬಾಂಗ್ಲಾದೇಶದ ಹಿಂದು ಶರಣಾರ್ಥಿಗಳಿಗೆ ಪುನರ್ವಸತಿ ಕಲ್ಪಿಸಿತ್ತು. ಅಲ್ಲಿನ ಹಿಂದುಗಳನ್ನು ಮಾತನಾಡಿಸಿ ಅವರ ನೋವನ್ನು ದಾಖಲಿಸುವ ಪ್ರಯತ್ನವೇ ಈ ಪುಸ್ತಕ ಎಂದು ವಿವರಿಸಲಾಗಿದೆ. ಇಲ್ಲಿ ವಲಸೆ ಬಂದಿದ್ದ ಹಿಂದೂಗಳಲ್ಲಿ ಅಲ್ಲಿಯ ಪರಿಸ್ಥಿತಿ, ಅನುಭವಿಸಿದ ಕಷ್ಟ ನಷ್ಟಗಳು ಇವೆಲ್ಲವನ್ನೂ ಅಧ್ಯಯನ ನಡೆಸಿ , ಈ ಕೃತಿಯನ್ನು ರಚಿಸಲಾಗಿದೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE