‘ಉಳಿದವರು ಕಂಡಂತೆ ವಸು ಮಳಲಿ ಮತ್ತು ಅವರ ಕೊನೆಯ ಉಪನ್ಯಾಸ’ ಎಂಬುದು ಡಾ. ಮೀನಾಕ್ಷಿ ಬಾಳಿ ಹಾಗೂ ರೀಟಾ ರೀನಿ ಅವರು ಸಂಪಾದಿಸಿದ ಬರಹಗಳ ಕೃತಿ ಇದು. ವಸು ಮಳಲಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ, ಕನ್ನಡ ಲೇಖಕಿ, ಅಂಕಣಕಾರ್ತಿ, ಚಿಂತಕಿ ಹಾಗೂ ಸಿನಿಮಾ ನಿರ್ದೇಶಕಿ. ಅವರು ಕನ್ನಡ ಸಾಹಿತಿ ಮಳಲಿ ವಸಂತ ಕುಮಾರ್ ಹಾಗೂ ಶಾಂತ ವಸಂತಕುಮಾರ್ ಅವರ ಹಿರಿಯ ಪುತ್ರಿ. ಹಾಲಿವುಡ್ನಲ್ಲಿ ನಿರ್ದೇಶನದ ತರಬೇತಿ ಪಡೆದಿದ್ದ ವಸು ಮಳಲಿ, ನಕ್ಸಲ್ ನಾಯಕ ಸಾಕೇತ ರಾಜನ್ ಜೀವನ ಆಧರಿಸಿದ 'ಶಸ್ತ್ರ' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಪ್ರಗತಿಪರ ಮನೋಧರ್ಮದ ವಸು ಮಳಲಿ ಕುರಿತು ಅವರ ಒಡನಾಡಿ ಅಭಿಮಾನಿಗಳು ಬರೆದ ಬರಹಗಳನ್ನು ಹಾಗೂ ಅವರ ಕೊನೆಯ ಉಪನ್ಯಾಸದ ಪಠ್ಯವನ್ನು ಸಂಕಲಿಸಿದ ಕೃತಿ ಇದು.
ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ...
READ MORE