ಉಡುಪಿ ಜಿಲ್ಲೆ

Author : ಉದಯ ಕುಮಾರ ಇರ್ವತ್ತೂರು

Pages 160




Year of Publication: 2007
Published by: ದಾಮಿನಿ ಸಾಹಿತ್ಯ
Address: 559, 9ನೆ ಮುಖ್ಯ ರಸ್ತೆ, ವಿಜಯ ನಗರ ಬೆಂಗಳೂರು- 560001

Synopsys

ಲೇಖಕ ಡಾ. ಉದಯ ಕುಮಾರ ಇರ್ವತ್ತೂರು ಅವರ ಕೃತಿ ʻಉಡುಪಿ ಜಿಲ್ಲೆʼ- ಆಧುನೀಕರಣ, ಅಭಿವೃದ್ದಿ, ಮತ್ತು ಕೈಗಾರಿಕೆ. ಪುಸ್ತಕವು ಉಡುಪಿ ಜಿಲ್ಲೆ ಹೊಸದಾಗಿ ಅಸ್ತಿತ್ವಕ್ಕೆ ಬಂದಂತಹ ಸಂದರ್ಭದಲ್ಲಿ ಈ ಪ್ರದೇಶ ಸಾಧಿಸಿರುವ ಪ್ರಗತಿಯ ಕುರಿತಂತೆ ಮಾಹಿತಿಗಳನ್ನು ನೀಡುತ್ತದೆ. ಇದು ಆಗಸ್ಟ್‌ 1997ರಲ್ಲಿ ಅಸ್ಥಿತ್ವಕ್ಕೆ ಬಂದ ಒಂದು ಜಿಲ್ಲೆಯಾಗಿದೆ. ಉತ್ತರದ ನಾಲ್ಕು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಹೆಬ್ರಿಯನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಆದರೆ ಈ ಎರಡೂ ಜಿಲ್ಲೆಗಳ ಇತಿಹಾಸ ಪರಂಪರೆಯು ಹೆಚ್ಚು ಸಮಾನ ಸ್ವರೂಪದ್ದಾಗಿದೆ. ಹೀಗೆ ಉಡುಪಿ ಜಿಲ್ಲೆಯ ಬಗ್ಗೆ ರಚಿಸಲಾದ ಒಂದು ಕಿರು ಹೊತ್ತಿಗೆ ಇದಾಗಿದೆ.

About the Author

ಉದಯ ಕುಮಾರ ಇರ್ವತ್ತೂರು
(01 June 1960)

ಡಾ. ಉದಯ ಕುಮಾರ್‌ ಇರ್ವತ್ತೂರು ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ತಂದೆ ನೇಮಿರಾಜ್‌ ಹಾಗೂ ತಾಯಿ ಮಾಲತಿ. ಮಂಗಳೂರಿನ ಹಂಪನಕಟ್ಟೆಯ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಬರವಣಿಗೆ ಇವರ ನೆಚ್ಚಿನ ಹವ್ಯಾಸ. ಈವರೆಗೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳು; ವಾಣಿಜ್ಯ ಶಾಸ್ತ್ರ,- ಕನ್ನಡ ವಿಶ್ವವಿದ್ಯಾಲಯ ಹಂಪಿ, ಅಭಿವೃದ್ಧಿ: ವಾಸ್ತವ ಮತ್ತು ವಿಕಲ್ಪ, ಉಡುಪಿ ಜಿಲ್ಲೆ, ಸರ್ವೋದಯ ಮತ್ತು ಅಭಿವೃದ್ದಿ, ಗೆಲುವಿನ ದುಃಖ ಮತ್ತು ಸೋಲಿನ ಸುಃಖ ಇತ್ಯಾದಿ. ...

READ MORE

Related Books