‘ಥರ್ಡ್ ಬೆಲ್’, ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಅವರ ರಂಗಭೂಮಿ ಕುರಿತಾದ ಲೇಖನ ಸಂಕಲನ. ಪತ್ರಿಕೆ, ಎಲೆಕ್ಟ್ರಾನಿಕ್ ಹಾಗೂ ಆನ್ಲೈನ್ ಮಾಧ್ಯಮ ಮೂರರಲ್ಲೂ ನುರಿತ ಪತ್ರಕರ್ತರು. ಸಮುದಾಯ ರಂಗ ತಂಡ ಪ್ರಸನ್ನರ ನೇತೃತ್ವದಲ್ಲಿ ಆರಂಭಿಸಿದ ಸಾಂಸ್ಕೃತಿಕ ಜಾಥಾದಿಂದ ಪ್ರಭಾವಿತರಾಗಿ ರಂಗ ಚಳವಳಿಯ ಜೊತೆ ಗುರುತಿಸಿಕೊಂಡರು. ರಂಗ ವಿಮರ್ಶೆಗೆ ಮೋಹನ್ ಅವರು ಕೊಟ್ಟ ಕೊಡುಗೆ ಅಪಾರ. ನೀನಾಸಂನ ತಿರುಗಾಟ, ಸಮುದಾಯದ ಸಾಂಸ್ಕೃತಿಕ ಉತ್ಸವಗಳು, ಬೆಂಗಳೂರಿನಲ್ಲಿ ಜರುಗಿದ ಬಹುತೇಕ ನಾಟಕಗಳ ವಿಮರ್ಶೆಯನ್ನು ಮಾಡಿದ್ದಾರೆ. ಮಾಧ್ಯಮ ಜಗತ್ತಿಗೆ ಕಾಲಿಟ್ಟ ಮೇಲೆ ರಂಗಭೂಮಿಯ ನಂಟನ್ನು ಉಳಿಸಿಕೊಂಡೇ ಬಂದಿದ್ದಾರೆ. ಇಂದಿಗೂ ಕಲಾಕ್ಷೇತ್ರ ಕೆ.ಎಚ್.ಕಲಾಸೌಧ, ರಂಗಶಂಕರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಪತ್ರಿಕೋದ್ಯಮದ ಕೆಲವೇ ಕೆಲವರಲ್ಲಿ ಜಿ.ಎನ್. ಮೋಹನ್ ಸಹ ಒಬ್ಬರು. ಅವರ ರಂಗಭೂಮಿಯ ನಂಟಿಗೆ ಈ ಕೃತಿ ಸಾಕ್ಷಿ ನುಡಿಯುತ್ತದೆ.
ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಕನ್ನಡ ಪತ್ರಿಕೋದ್ಯಮದ ಪ್ರಮುಖರಲ್ಲೊಬ್ಬರು. ಪತ್ರಿಕೆ, ಎಲೆಕ್ಟ್ರಾನಿಕ್ ಹಾಗೂ ಆನ್ ಲೈನ್ ಮೂರು ಮಾಧ್ಯಮಗಳಲ್ಲಿ ನುರಿತವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕದಲ್ಲಿ ಮೊದಲ ರ್ಯಾಂಕ್ ನೊಂದಿಗೆ ಪದವಿ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪ್ರಜಾವಾಣಿಯ ವರದಿಗಾರರಾಗಿ, ಈಟಿವಿ ಚಾನಲ್ ನ ಹಿರಿಯ ಸಂಪಾದಕರಾಗಿ, ಸಮಯ ಚಾನಲ್ ಹಾಗೂ ಅವಧಿಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 'ಸೋನೆಮಳೆಯ ಸಂಜೆ', 'ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ' ಕವನ ಸಂಕಲನಗಳು, 'ನನ್ನೊಳಗಿನ ಹಾಡು ಕ್ಯೂಬಾ' (ಪ್ರವಾಸ ಕಥನ), 'ಕಾಫಿ ಕಪ್ಪಿನೊಳಗೆ ಕೊಲಂಬಸ್'(ವಿಚಾರ ಕಥನ) ಇವರ ಪ್ರಮುಖ ಕೃತಿಗಳು. ಸಾಹಿತ್ಯ, ನಾಟಕ, ...
READ MORE