ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ

Author : ಗೌರೀಶ ಕಾಯ್ಕಿಣಿ

Pages 114

₹ 5.00




Year of Publication: 1983
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಚಾಮರಾಜಪೇಟೆ, ಬೆಂಗಳೂರು-18

Synopsys

‘ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ’ ಲೇಖಕ ಗೌರೀಶ ಕಾಯ್ಕಿಣಿ ಸಂಪಾದಿಸಿರುವ ಕೃತಿ. ಪುಸ್ತಕದ ಕುರಿತು ಬರೆಯುತ್ತಾ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಕಾಲು ಶತಕದ ಕಾಲದಲ್ಲಿ ಕನ್ನಡ ಸಾಹಿತ್ಯವು ವಿವಿಧ ಕ್ಷೇತ್ರಗಳಲ್ಲಿ ಕಂಡುಬಂದ ವಿಕಾಸ ಮತ್ತು ಪ್ರಗತಿಯ ಸಮಗ್ರ ಚಿತ್ರಣವನ್ನು ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಬಿಡಿ ಹೊತ್ತಿಗೆಗಳಲ್ಲಿ ಪ್ರಕಟಿಸುವ ಸ್ತುತ್ಯ ಉಪಕ್ರಮವನ್ನು 1972 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿತು. ಅದರ ಫರವಾಗಿ ಈ 25 ವರ್ಷಗಳಲ್ಲಿ ಕನ್ನಡದಲ್ಲಿ ವಿಚಾರ ಸಾಹಿತ್ಯದ ಕ್ಷೇತ್ರದಲ್ಲಿ ನಡೆದ ಕಾರ್ಯದ ಒಂದು ಸಮಾಲೋಚನೆಯನ್ನು ಬರೆಯಲು ನನ್ನನ್ನು ಕೇಳಿಕೊಳ್ಳಲಾಗಿತ್ತು. ನಾನು ಈ ಪುಸ್ತಕದ ಹಸ್ತಪ್ರತಿಯನ್ನು ಸಿದ್ಧಪಡಿಸಿ ಒಪ್ಪಿಸಿಯೂ ಆಗಿತ್ತು. ಆದರೆ ತುಟಿಗೂ ಬಟ್ಟಲಿಗೂ ಹೇಗೋ ಹಾಗೆಯೇ ತುಟಿಗೆ ಹಚ್ಚಿದ ಬಟ್ಟಲಿಗೂ ಗುಟುಕಿಗೂ ನಡುವೆ ತಟ್ಟೆ ಜಾರುವುದುಂಟು ಕೆಲವು ಅಪರಿಹಾರ್ಯ ಕಾರಣಾಂತರಗಳಿಂದಾಗಿ ಅಂದು ಅದು ಪ್ರಕಟಿಸುವುದು ಸಾಧ್ಯವಾಗದೇ ಉಳಿಯಿತು. ಅದೀಗ 10 ವರ್ಷಗಳ ನಂತರ ಮಾನ್ಯಮಿತ್ರ ಶ್ರೀಮಾನ್ ಹಂಪ. ನಾಗರಾಜಯ್ಯನವರ ಅಧ್ಯಕ್ಷತೆಯಲ್ಲಿ ಅವರ ಸರಳಸಜ್ಜಿನಿಕೆಯ ಪ್ರೊತ್ಸಾಹದಿಂದ ಸಾಧ್ಯವಾಗುತ್ತಿದೆ. ಇದಕ್ಕಾಗಿ ಕಣ್ಣಿಗೆ ಬೀಳುವಂತೆ ಅದರೇನೇ ಅದರ ಬರಹಗಾರನ ಕೃತಾರ್ಥತೆ ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಇಲ್ಲಿ ಹೆಡೆಯೆತ್ತಿದ ಶೇಷ ಪ್ರಶ್ನೆಗಳು, ವಿಚಾರಸಾಹಿತ್ಯ-ಎಂದರೇನು, ನಮ್ಮ ವೈಚಾರಿಕ ಜಾಗೃತಿ-ಪ್ರಗತಿ, ಬುದ್ಧಿಜೀವಿಯ ಭಾರತೀಯ ಬಿಂಬ, ವಿದೇಶಗಳ ವೈಚಾರಿಕರು, ಮಾನವೀ ಪ್ರಜ್ಞೆಯ ಮೂರು ಹಂತಗಳು, ನಮ್ಮ ವೈಚಾರಿಕತೆಯ ಪ್ರತಿಗಾಮಿ ಪ್ರತಿಕ್ರಿಯೆ, ಸ್ವಾತಂತ್ರ್ಯ ಪೂರ್ವದ ವೈಚಾರಿಕ ವೈಭವ, ರಾಷ್ಟ್ರೀಯ ಪ್ರಜ್ಞೆಗೆ ಪೋಷಕವಾದ ವಿಷಯಗಳು, ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯದ ವರ್ಗೀಕರಣ, ವೈಚಾರಿಕತೆಯ ಬಗೆಗಳು, ರೀತಿಯಲ್ಲಿ ಎರಡು- ವಿಧ- ಶೈಲಿ, ಶಕ್ತಿ, ಇನ್ನೂ ತೀರ ಸ್ಥೂಲ ಪರಿಚಯ, ಸಾಮಾಜಿಕ ರಂಗ ಮತ್ತು ವೈಚಾರಿಕತೆ, ಸಾಹಿತ್ಯ ವಿಮರ್ಶೆಯ ಹೆಜ್ಜೆಪಾಡು ಸೇರಿದಂತೆ 24 ಲೇಖನಗಳು ಸಂಕಲನಗೊಂಡಿವೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books