ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು ಎನ್.ಪಿ.ಶಂಕರನಾರಾಯಣ ರಾವ್ ಅವರು ಬರೆದ ಪುಸ್ತಕ. ಭಾರತೀಯರಿಗೆ ಗಂಗೆ ಪವಿತ್ರಳು. ಭಾರತೀಯರ ಅಸ್ಮಿತೆ. ಹಲವು ನದಿಗಳ ಸಂಗಮ. ಇವುಗಳ ಸಮೀಕ್ಷಣೆಯೇ ಇಲ್ಲಿಯ ವಸ್ತು.
ದೇಶವು ಬ್ರಿಟಿಷರ ಪಾಲಾಗಿದ್ದು, ವಸಾಹತುಶಾಹಿಯು ಹೇಗೆ ಭಾರತವನ್ನು ಆಕ್ರಮಿಸಿತು. ಇಲ್ಲಿಯ ಆರ್ಥಿಕ ಬಲವನ್ನು ಹೇಗೆ ಮುರಿಯಿತು. ಚಳವಳಿಗಳು ಹುಟ್ಟಿಕೊಂಡ ಬಗೆ, ಆದರೆ, ಜಾತಿ ಅಡ್ಡವಾಗಿದ್ದು ಹೇಗೆ, ಎಲ್ಲವನ್ನೂ ಮೀರಿ ಸ್ವಾತಂತ್ರ್ಯ ಪಡೆಯಬೇಕೆಂಬ ಉತ್ಕಟ ಆಸೆ, ಛಲಗಳು ಎಂಬ ತೊರೆಗಳು ಸೇರಿ ಮಹಾನದಿಯಾಯಿತು. ಈ ನಿಟ್ಟಿನಲ್ಲಿ ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳಿವೆ. ಆದರೆ, ಎಲ್ಲಿಯೂ ಪೂರ್ವಗ್ರಹಪೀಡಿತವಾಗಿಲ್ಲ. ಸುಮಾರು 500 ವರ್ಷಗಳ ಇತಿಹಾಸವಾಗಿ ಈ ಕೃತಿ ಉಳಿಯುತ್ತದೆ. ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರ (1991) ಲಭಿಸಿದೆ.
.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...
READ MORE