ಸ್ವದೇಶೀ ಜಾಗೃತಿ

Author : ಎಸ್‌.ಆರ್‌. ರಾಮಸ್ವಾಮಿ

Pages 130

₹ 35.00




Year of Publication: 1994
Published by: ಸಾಹಿತ್ಯ ಸಿಂಧು ಪ್ರಕಾಶನ
Address: ಬೆಂಗಳೂರು-19.

Synopsys

ಸ್ವದೇಶಿ ಜಾಗೃತಿ ರಾಷ್ಟ್ರೀಯ ವಿಚಾರ ಬರಹಗಳ ಪುಸ್ತಕವನ್ನು ಲೇಖಕ ಎಸ್.ಆರ್.‌ ರಾಮಸ್ವಾಮಿ ಅವರು ರಚಿಸಿದ್ದಾರೆ. ಡೆಂಕಲ್‌ ಆಕ್ರಮಣಕ್ಕೆ ಪರಿಹಾರ ಎಂಬ ಅಡಿ ಬರಹವನ್ನು ಈ ಕೃತಿಯು ಹೊಂದಿದೆ. ಈ ಪುಸ್ತಕದಲ್ಲಿ ನಮ್ಮ ನಾಗರಿಕತೆ, ರಾಜಕೀಯ, ಆರ್ಥಿಕತೆ, ಸಾಮಾಜಿಕ ವ್ಯವಸ್ಥೆಗಳು, ವೈಯಕ್ತಿಕ ಜೀವನ ಶೈಲಿ – ಇವು ಇಂದು ಪರಸ್ಪರ ವಿಮುಖಗೊಂಡಿವೆ. ಈ ಎಲ್ಲ ಆಯಾಮಗಳ ನಡುವೆ ಸೂತ್ರಬದ್ಧತೆಯನ್ನು ತರಬಲ್ಲದ್ದು ಸ್ವದೇಶೀ ಚಿಂತನೆ, ಕಾರ್ಯಾಚರಣೆ ಮತ್ತು ಜೀವನಶೈಲಿ. ಈ ಭದ್ರ ಬುನಾದಿ ಇದ್ದದ್ದರಿಂದಲೇ ರಾಜಕೀಯ ದಾಸ್ಯವಿದ್ದಾಗಲೂ ಭಾರತದ ಸಮಾಜ ಗಣನೀಯ ಮಟ್ಟದಲ್ಲಿ ಸ್ವಾವಲಂಬನೆಯನ್ನು ಉಳಿಸಿಕೊಂಡಿದ್ದದ್ದು. ಹೀಗೆ ಸ್ವದೇಶೀ ಚಿಂತನೆ ಸೈದ್ಧಾಂತಿಕ ತಳಹದಿ ಪಡೆದದ್ದು ಮಾತ್ರವಲ್ಲದೆ ಇತಿಹಾಸಸಿದ್ಧವೂ ಆಗಿದೆ. ಮತ್ತು ಇದರ ಆಚರಣೆ ಪ್ರತ್ಯೇಕ ವ್ಯಕ್ತಿಯ ಕೈಯಲ್ಲಿದೆ. ಈ ಸುಪ್ತಶಕ್ತಿಗೆ ಚೇತರಿಕೆ ನೀಡಲು ಇಂದು ಬೇಕಾಗಿದೆ – ಸ್ವದೇಶೀ ಜಾಗರಣ ಎಂದು ಕೃತಿಯ ಕುರಿತಾಗಿ ವಿವರಿಸಲಾಗಿದೆ.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books