ಕೃಷ್ಣ ಮಾಸಡಿ ಅವರ ಲೇಖನಗಳ ಸಂಗ್ರಹ ಕೃತಿ ’ಸ್ವರ್ಗದ ಬಣ್ಣ’. ಅವರು ವಿವಿಧ ಪತ್ರಿಕೆಗಳಿಗೆ ಬರೆದ ಬರಹಗಳು ಇಲ್ಲಿ ಒಟ್ಟಿಗಿವೆ. "ಕೃಷ್ಣ ಮಾಸಡಿ ಮಲೆನಾಡಿನ ಅಂಚಿನವರು, ಹಾಗೆಯೇ ಕನ್ನಡ ಕಥನ ಲೋಕಕ್ಕೆ ಅಪೂರ್ವ ಕತೆಗಳನ್ನು ಕೊಡುಗೆಯಾಗಿ ನೀಡಿಯೂ ಪ್ರಸಿದ್ಧಿಯ ಅಂಚಿಗೆ ಉಳಿದವರು. ಅಂಚುಗಳನ್ನು ನಿರ್ಲಕ್ಷಿಸುವುದು ಚರಿತ್ರೆಯ ಪ್ರಮುಖ ಲಕ್ಷಣವೂ ಹೌದು ರಾಜಕಾರಣವೂ ಹೌದು, ಆದರೆ ಸಂಸ್ಕೃತಿಯ ಕಣ್ಣು ಅನ್ವೇಷಿಸುವುದೇ ಇಂತಹ 'ಮರೆ'ಗಳಾಚೆಗಿನ ಜಲ ಕಣ್ಣುಗಳನ್ನ, ಮಾಸಡಿ ಅವರ ಸೃಜನ ಪ್ರತಿಭೆ ಕೂಡ ಈ ಬಗೆಯದೆ, ಕೃಷ್ಣ ಮಾಸಡಿ ಅವರು ಭಾಷೆ ಮಾಧ್ಯಮವಾದ ಕಥನದಲ್ಲಿ ಹಾಗೂ ದೃಶ್ಯ ಮಾಧ್ಯಮವಾದ ಸಿನಿಮಾಗಳ ಮೂಲಕ ಬದುಕಿನ 'ಮಾಯಾವಾಸ್ತವಗಳನ್ನು ಅನಾವರಣ ಮಾಡುತ್ತಿರುವ ಲೇಖಕ, ತಾನು ಸೃಷ್ಟಿಸಿದ ಕೃತಿಯ ಬಗೆಗಿನ ಮೋಹವನ್ನು ಮೀರಿಯೂ ತನ್ನ ಕೃತಿಗಳ ಬಗ್ಗೆ ನಿರ್ಭಾವುಕರಾಗಿ ವಿಮರ್ಶಿಸುವ ಗುಣವುಳ್ಳವರು. ನಮ್ಮ ಪಂಥದ ತೀವ್ರ ಪ್ರಭಾವಕ್ಕೆ ಒಲಿದು ಬರವಣಿಗೆಯನ್ನು ಆರಂಭಿಸಿದರೂ ತಮ್ಮ ಅಭಿವ್ಯಕ್ತಿಯಲ್ಲಿ ಭಾರತೀಯ ಗ್ರಾಮಜೀವನದ ಆಧುನಿಕ ಆಯಾಮ, ಪಲ್ಲಟಗಳನ್ನು ಅತೀವ ಅನುರಕ್ತಿಯಿಂದ ಶೋಧಿಸಿ ಬರೆದಾಗಲೂ ಗುಪ್ತಭಕ್ತನ ಹಾಗೆ ಮರೆಯಲ್ಲಿಯೇ ಇರಬಯಸಿದವರು ಆ ಕಾರಣದಿಂದಲೇ ಮಾಸಡಿಯವರ ಬರಹಗಳು ಸ್ಪಟಿಕದ ಪ್ರತಿಫಲನ ಗುಣವನ್ನು ಹಾಗೂ ಮಣ್ಣಿನ ವಾಸನೆಯನ್ನು ತಟ್ಟನೆ ಹೊಳೆಸುವ ಮೂಲಕ ಓದುಗರಿಗೆ ಆಪ್ತತೆಯ ಅನುಭೂತಿಯನ್ನು ನೀಡುತ್ತವೆ" ಎಂದು ಕೆ.ವೈ. ನಾರಾಯಣಸ್ವಾಮಿಯವರು ಪುಸ್ತಕದ ಬಗ್ಗೆ ಹೇಳಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಮಾಸಡಿಯಲ್ಲಿ ಜನಿಸಿದ ಕೃಷ್ಣ ಮಾಸಡಿಯವರು ಪತ್ರಕರ್ತರಾಗಿ, ಸಾಹಿತಿಯಾಗಿ, ಚಲನಚಿತ್ರ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಕಾಣಿಸಿದ್ದಾರೆ. 'ಲಂಕೇಶ್ ಪತ್ರಿಕೆ'ಯಲ್ಲಿ ಆರಂಭಿಕ ವರದಿಗಾರರಾಗಿ, ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ (2012) ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದವರು ಮಾಸಡಿಯವರು. ತಮ್ಮದೇ ಕಾದಂಬರಿ 'ನಂಬಿಕೆಗಳು ಆಧರಿಸಿದ ಚಲನಚಿತ್ರವನ್ನೂ ನಿರ್ದೇಶಿಸಿದವರು. ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಪು.ತಿ.ನ., ಜಿ.ಎಸ್.ಎಸ್., ...
READ MORE