ಸೃಜನಶೀಲ ವೈಚಾರಿಕತೆ

Author : ಕಾಳೇಗೌಡ ನಾಗವಾರ

Pages 256

₹ 125.00




Published by: ಸಪ್ನ ಬುಕ್ ಹೌಸ್

Synopsys

ಲೇಖಕ ಪ್ರೊ. ಕಾಳೇಗೌಡ ನಾಗವಾರ ಅವರ ಬರಹಗಳ ಸಂಕಲನ ಸೃಜನಶೀಲ ವೈಚಾರಿಕತೆ. ಸಾಹಿತ್ಯದ ಕುರಿತ ಬರಹಗಳು, ವ್ಯಕ್ತಿಚಿತ್ರಗಳು, ಭಾಷಣಗಳು, ಅನುಭವ ಬರಹಗಳು, ಪುಸ್ತಕ ಪ್ರತಿಕ್ರಿಯೆ, ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳು, ಸಂದರ್ಶನಗಳು – ಹೀಗೆ ವಿವಿಧ ಸ್ವರೂಪದ ನಲವತ್ತು ಬರಹಗಳ ಸಂಕಲನ `ಸೃಜನಶೀಲ ವೈಚಾರಿಕತೆ‘. ಇವುಗಳನ್ನೆಲ್ಲ ವಿಮರ್ಶಾ ಲೇಖನಗಳು ಎಂದು ಪುಸ್ತಕದ ಮುಖಪುಟದಲ್ಲಿ ಕರೆಯಲಾಗಿದೆ. ಸಂಕಲನದ ಬಹುತೇಕ ಲೇಖನಗಳು ಲೇಖಕರ ಒಡನಾಟಕ್ಕೆ ದೊರಕಿದ ಸಾರಸ್ವತ ಲೋಕದ ಗಣ್ಯರ ಕುರಿತ ನುಡಿಚಿತ್ರಗಳಿಗೆ ಮೀಸಲಾಗಿವೆ. ವೈಕಂ ಮಹಮದ್ ಬಷೀರ್, ಗೋರೂರು, ಕರೀಂಖಾನ್, ಬೆಸಗರಹಳ್ಳಿ ರಾಮಣ್ಣ, ವಿಜಯಾದಬ್ಬೆ, ಕೆಂಗಲ್, ಕುವೆಂಪು, ಪೂರ್ಣಚಂದ್ರ ತೇಜಸ್ವಿಯಿಂದ ಹಿಡಿದು ಕಿರಿಯ ಗೆಳೆಯರ ಕುರಿತು ಕಾಳೇಗೌಡರು ಬರೆದಿದ್ದಾರೆ. ಈ ಬರಹಗಳಿಗೆ ಆಪ್ತತೆಯ ಗುಣವಿದೆ. ಬೆಸಗರಹಳ್ಳಿ ಅವರ ಕುರಿತ ಬರಹವಂತೂ ಹಲವು ನೆನಪುಗಳನ್ನು ಮೀಟುವಂತಹದ್ದು. `ಸೃಜನಶೀಲ ವೈಚಾರಿಕತೆ‘, `ಸಾಹಿತ್ಯದಿಂದ ಏನು ಪ್ರಯೋಜನ?’, `ಸಾಹಿತ್ಯದ ಜವಾಬ್ದಾರಿ‘, ಲೇಖನಗಳು ಬರಹದ ಸೃಜನಶೀಲ ಸಾಧ್ಯತೆಗಳ ವಿಶ್ಲೇಷಣೆ ಆಗಿರುವಂತೆಯೇ ಬರಹಗಾರನ ಆತ್ಮವಿಶ್ಲೇಷಣೆಯ ಸಾಧ್ಯತೆಗಳೂ ಆಗಿರುವುದು ವಿಶೇಷ. `ಜೀವನ ಪ್ರೀತಿ‘, ಹಂಚುಣ್ಣುವ ಉದಾರಗುಣ‘ ಬರಹಗಳಿಗೆ ಪ್ರಬಂಧದ ಚೌಕಟ್ಟಿದೆ.

ಕಾಳೇಗೌಡರ ವಿಚಾರ-ಅನುಭವಗಳ ಹಿನ್ನೆಲೆಯಲ್ಲಿ ಹಲವು ಬರಹಗಳು ಇಷ್ಟವಾದರೂ, ಪುಸ್ತಕದಲ್ಲಿ ಪ್ರಕಾಶಕರ ತುರ್ತು ಎದ್ದು ಕಾಣುತ್ತದೆ. ಲೇಖಕರ ಮಾತಿಗೆ ಕೂಡ ಆಸ್ಪದವಿಲ್ಲದೆ ಹೋಗಿರುವುದರಿಂದ ಪುಸ್ತಕದ ಪ್ರವೇಶ ಒಂದು ರೀತಿ ಕಲಸುಮೇಲೋಗರ ಎನ್ನಿಸುತ್ತದೆ. ಬರಗೂರು ರಾಮಚಂದ್ರಪ್ಪ ಹಾಗೂ ಬಿ. ಚಂದ್ರೇಗೌಡರು ಯಾವುದೋ ಸಂದರ್ಭದಲ್ಲಿ ಮಾಡಿದ ಕಾಳೇಗೌಡರ ಸಂದರ್ಶವನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿರುವ ಔಚಿತ್ಯ ಅರ್ಥವಾಗುವುದಿಲ್ಲ. ಲೇಖನಗಳ ಕೊನೆಯಲ್ಲಿ ಬರವಣಿಯ ದಿನಾಂಕವನ್ನು ನಮೂದಿಸಲಾಗಿದೆ. ಆದರೆ, ಸ್ಥಳ-ಸಂದರ್ಭದ ಉಲ್ಲೇಖವಿಲ್ಲ.

 

About the Author

ಕಾಳೇಗೌಡ ನಾಗವಾರ
(02 February 1947)

ಕತೆಗಾರ ಕಾಳೇಗೌಡ ನಾಗವಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರದವರು. ತಂದೆ ಸಿದ್ದೇಗೌಡ, ತಾಯಿ ಲಿಂಗಮ್ಮ. ನಾಗವಾರ, ಚೆನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದ ಎಂ.ಎ.(1971)  ಪದವೀಧರರು. ಬೆಂಗಳೂರು ವಿ.ವಿ.ಯಿಂದ ‘ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ’ ಪ್ರಬಂಧಕ್ಕೆ ಪಿಎಚ್ ಡಿ ಪದವಿ (1985) ಪಡದರು.  ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ಬೆಂಗಳೂರು ವಿ.ವಿ. ಜ್ಞಾನಭಾರತಿ ಕನ್ನಡ (1985) ಅಧ್ಯಯನ ಕೇಂದ್ರ ಹಾಗೂ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (2007ರವರೆಗೆ) ಪ್ರಾಧ್ಯಾಪಕರಾಗಿದ್ದರು.  ಕಾಳೇಗೌಡ ನಾಗವಾರ ಅವರ ...

READ MORE

Related Books