‘ಶೃಂಗಾರ ಕಥೆಗಳು’ ಕೃತಿಯು ಬೇಲೂರು ರಾಮಮೂರ್ತಿ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳನ್ನು ಲೇಖಕರು ಹೀಗೆ ಕಟ್ಟಿಕೊಟ್ಟಿದ್ದಾರೆ : ಇದು ಪುರಾಣ ಪ್ರಸಂಗಗಳಿಂದ ಆಯ್ದ ಕಥೆಗಳು. ಕಥಾ ಹಂದರ ತುಂಬಾ ವಿಸ್ತಾರವಾದುದಾದರೂ ಶೃಂಗಾರಕ್ಕೆ, ಪ್ರಣಯಕ್ಕೆ, ವಿವಾಹಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ಇನ್ನಿತರ ಅಂಶಗಳನ್ನು ಗೌಣ ಮಾಡಿದೆ. ಉದಾಹರಣೆಗೆ, ನಳ-ದಮಯಂತಿ ಮದುವೆಯಾದ ಮೇಲೆ, ದೇವಯಾನಿ-ಯಯಾತಿ ಮದುವೆಯಾದ ಮೇಲೆ, ಪುರೂರವನನ್ನು ಊರ್ವಶಿ ಬಿಟ್ಟು ಹೊರಟು ಹೋದ ಮೇಲೆ ಕಥೆ ಬೇರೆಯದೇ ಜಾಡು ಹಿಡಿಯುತ್ತೆ. ಹೀಗಾಗಿ ಅಲ್ಲಿನ ಅಂಶಗಳನ್ನು ಶೃಂಗಾರ ಕಥೆಗಳ ಹಂದರದಲ್ಲಿ ಸೇರಿಸಿಲ್ಲ. ಎರಡು ಪಾತ್ರಗಳ ಪರಿಚಯ, ಸಂಗಮ, ಪ್ರೀತಿ ಮೂಡುವುದು, ಅದು ಮದುವೆಯಲ್ಲಿ ಪರ್ಯವಸನವಾಗುವುದಷ್ಟಕ್ಕೆ ಮಾತ್ರ ಕಥೆಯನ್ನು ಸೀಮಿತಗೊಳಿಸಲಾಗಿದೆ. ಹೀಗಾಗಿ ಇವೆಲ್ಲ ಶೃಂಗಾರ ಕಥೆಗಳು, ಇವು ನಿಮಗೆ ಇಷ್ಟವಾಗುವುದೆನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಲೇಖಕ ಬೇಲೂರು ರಾಮಮೂರ್ತಿ.
ಈ ಕೃತಿಯು ಶಂತನು- ಸತ್ಯವತಿ, ಊರ್ವಶ್ರೀ-ಪುರೂರವ, ಮೇನಕೆ-ವಿಶ್ವಾಮಿತ್ರ, ಶಕುಂತಲೆ-ದುಶ್ಯಂತ, ದಮಯಂತಿ-ನಳ, ದೇವಯಾನಿ-ಕಚ-ಯಯಾತಿ, ವಸಿಷ್ಠ-ಆರುಂಧತಿ, ಅರ್ಜುನ- ಸುಭದ್ರೆ, ಭೀಮ-ಹಿಡಿಂಬೆ, ಉದಯನ - ವಾಸವದತ್ತೆ, ಸುಕನ್ಯೆ- ಚ್ಯವನ, ಶ್ರೀಕೃಷ್ಣ- ರುಕ್ಮಿಣಿ, ಅನಿರುದ್ಧ-ಉಷೆ ಹೀಗೆ 13 ಅಧ್ಯಾಯಗಳನ್ನು ಒಳಗೊಂಡಿದೆ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE