ಲೇಖಕ ರಾಜೇಗೌಡ ಹೊಸಹಳ್ಳಿ ಅವರ ಲೇಖನಗಳ ಸಂಗ್ರಹ ಶ್ರೀರಾಮಾಯಣ ದರ್ಶನಂ ಸಮಕಾಲೀನ ತತ್ವಾದರ್ಶ ದರ್ಶನ. ರಾಮಾಯಣ ದರ್ಶನ ಮಹಾಕಾವ್ಯದ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಈ ಕೃಇಯಲ್ಲಿ ಲಭ್ಯವಿದೆ.
ರಾಜೇಗೌಡ ಹೊಸಹಳ್ಳಿ ಅವರು ಮೂಲತಃ ಹಾಸನ ಜಿಲ್ಲೆ ಆಲೂರು ಬಳಿಯ ಮರಸು ಹೊಸಹಳ್ಳಿಯವರು. ತಂದೆ- ಹೆಚ್.ಎಸ್. ರಂಗಪ್ಪ, ತಾಯಿ- ರಂಗಮ್ಮ. ಹೊಸಹಳ್ಳಿ. ಆಲೂರು-ಹಾಸನ ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಶಿಕ್ಷಣ ಪೂರೈಸಿದರು. 1974ರಲ್ಲಿ ಕನ್ನಡ ಎಂ.ಎ ಪದವಿ ಪಡೆದರು. ಆನಂತರ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಅಧಿಕಾರಿಯಾಗಿ ವೃತ್ತಿ ಅನಂತರ 2006ರಲ್ಲಿ ಸ್ವಯಂ ನಿವೃತ್ತಿಯಾದರು. ಈ ನಡುವೆ ಸಾಹಿತ್ಯ ಪ್ರವೃತ್ತಿಯಾಗಿಸಿಕೊಂಡಿದ್ದ ಅವರು ಡಾಕ್ಟರೇಟ್ ಪದವಿಯನ್ನೂ ಪಡೆದರು. ಆಳವಾದ ಓದು, ಸಾಹಿತ್ಯದ ಒಡನಾಟವಿರುವ ರಾಜೇಗೌಡ ಹೊಸಹಳ್ಳಿಯವರು ಸತ್ಯಭೋಜರಾಜ, ಮಗನ ತಿಂದ ಮಾರಾಯನ ದುರ್ಗ, ಕೋಳಿ ಮತ್ತು ತುಳಸೀಕಟ್ಟೆ, ಜಾನಪದ ಸಂಕಥನ, ...
READ MORE