‘ಶಿವರಾಮ ಕಾರಂತರ ಲೇಖನಗಳು ಸಂಪುಟ- 5’ ಕನ್ನಡದ ಹಿರಿಯ ಸಾಹಿತಿ ಶಿವರಾಮ ಕಾರಂತರ ಲೇಖನಗಳ ಸಂಕಲನ. ಇಲ್ಲಿ ಕಾರಂತರು ಬರೆದ ವೈಚಾರಿಕ ಬಿಡಿ ಬರಹಗಳಿವೆ. ಈ ಕೃತಿಯನ್ನು ಲೇಖಕಿ ಮಾಲಿನಿ ಮಲ್ಯ ಸಂಪಾದಿಸಿದ್ದಾರೆ. ಪುಸ್ತಕದಲ್ಲಿ ಧಾರ್ಮಿಕ ಮತ್ತು ತಾರ್ಕಿಕ ಎಂಬ ವಿಭಾಗವಿದ್ದು ಶ್ರೀರಾಮಕೃಷ್ಣ ಪರಮಹಂಸರ ಸಂದೇಶ, ಶ್ರೀಚೈತನ್ಯದೇವ, ಹರಿಯುವ ನದಿ, ಮುರಲೀಧರ, ವಿಗ್ರಹಾರಾಧನೆ, ದೇವರು ಇದ್ದರೆ, ನಮ್ಮ ಅಳತೆಯನ್ನು ಮೀರಿದ ದೇವರು ಸೇರಿದಂತೆ 30 ಲೇಖನಗಳಿವೆ. ವೈಜ್ಞಾನಿಕ ವಿಭಾಗದಲ್ಲಿ ಪ್ರಚಂಡವಾಚ. ಯೋಗಿಕ ವ್ಯಾಯಾಮ. ವಿನಾಳ ಗ್ರಂಥಿಗಳೂ, ಶರೀರವೂ, ವಿಜ್ಞಾನಯುಗ ಸೇರಿದಂತೆ ಒಟ್ಟು 95 ಲೇಖನಗಳು ಸಂಕಲನಗೊಂಡಿವೆ.
ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...
READ MORE