‘ಶಿಷ್ಯನೆಂಬಾವನಕ್ಕೆ’ ಲೇಖಕ ರಾಮಚಂದ್ರ ಗಣಾಪೂರ ಅವರ ಲೇಖನ ಸಂಕಲನ. ‘ಅಗಾಧವಾದ ಜಗದಲ್ಲಿ ಕಣ್ಣಿಗೆ ಕಾಣದ, ಅನುಭವಕ್ಕೆ ಬಾರದ ಅದೆಷ್ಟೋ ಸಾಧಕರನ್ನು ಕಾಣಲಾಗಿಲ್ಲ. ದೂರದಿಂದಲೇ ಗ್ರಹಿಸಿದ ಭಾವನಾತ್ಮಕ ಸಂದರ್ಭಗಳಿಗೆ ಅಕ್ಷರದ ಹೊದಿಕೆಯನ್ನು ತೊಡಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ’ ಎನ್ನುತ್ತಾರೆ ಲೇಖಕರು.
ಈ ಕೃತಿಯಲ್ಲಿ ಗುರು-ಶಿಷ್ಯರ ಸಂಬಂಧ, ಕಾವ್ಯ, ಕನ್ನಡ ಪ್ರಜ್ಞೆ ಊರಿನ ಐತಿಹಾಸಿಕ ಪರಂಪರೆ, ಸತ್ಪುರುಷರು, ಕವಿಗಳು, ಕಾದಂಬರಿಕಾರರು, ವಿಚಾರವಾದಿಗಳು, ಕಲಾವಿದರು, ವಚನಕಾರರು, ಹೋರಾಟಗಾರರು, ಸ್ವರವಚನಕಾರರು ಹೀಗೆ ವೈವಿಧ್ಯಮಯ ಸಂಗತಿಗಳಿವೆ.
ರಾಮಚಂದ್ರ ಗಣಾಪೂರ ತಮ್ಮ ಅಧ್ಯಯನ ಹಾಗೂ ಅಧ್ಯಾಪನದೊಂದಿಗೆ ಸಾಹಿತ್ಯದ ವಿದ್ಯಾರ್ಥಿ. ತಮ್ಮದೇ ಚೌಕಟ್ಟಿನಲ್ಲಿ ಓದು-ಬರಹದ ಲೋಕವನ್ನು ಸೃಷ್ಟಿಸಿಕೊಂಡು, ಅನೇಕ ವರ್ಷಗಳಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯಕ್ಕೆ 11 ಕೃತಿಗಳನ್ನು, 80ಕ್ಕೂ ಹೆಚ್ಚು ಲೇಖನಗಳನ್ನು ನೀಡಿದ್ದಾರೆ. ...
READ MORE