‘ಶಿಲ್ಪಕಲಾ ದೇವಾಲಯಕ್ಕೆ ದಾರಿ’ ಕೃತಿಯು ಶ್ರೀನಿವಾಸಮೂರ್ತಿ ಎನ್.ಎಸ್ ಅವರ ಕರ್ನಾಟಕದ ಆಯ್ದ 100 ಸುಂದರ ಅಪರಿಚಿತ ದೇವಾಲಯಗಳ ಪರಿಚಯ ಹಾಗೂ ಮಾರ್ಗಸೂಚಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಜನಮಾನಸದಲ್ಲಿರುವ ಪ್ರಸಿದ್ದ ದೇವಾಲಯಗಳನ್ನ ಹೊರತು ಪಡಿಸಿ ನೋಡಲೇಬೇಕಾದ ಹಲವು ದೇವಾಲಯಗಳ ಪರಿಚಯ ಇಲ್ಲಿದೆ. ಈ ನಿಟ್ಟಿನಲ್ಲಿ ಸುಮಾರು 500 ಕ್ಕೂ ಅಧಿಕ ಲೇಖನಗಳನ್ನು ಅಜ್ಞಾತ ದೇವಾಲಯಗಳ ಬಗ್ಗೆ ಬರೆದಿದ್ದು ನಾಡಿನ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದಲ್ಲದೇ ವಿವಿಧ ಮಾದ್ಯಮದ ಮೂಲಕ ದೇವಾಲಯಗಳನ್ನ ಪರಿಚಯವನ್ನ ತಲುಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅಂತಹ ದೇವಾಲಯಗಳ ಅಂಕಣಗಳಲ್ಲಿ ಆಯ್ದ ಅಪರೂಪದ 50 ಸ್ಥಳಗಳಅನ್ನ ದೇವಾಲಯಗಳ ಪರಿಚಯ ಈ ಪುಸ್ತಕದಲ್ಲಿದೆ. ಇದರ ಜೊತೆಯಲ್ಲಿ ಭೇಟಿ ನೀಡಿದ ದೇವಾಲಯಗಳ ಛಾಯಚಿತ್ರಗಳನ್ನು ತೆಗೆಯುವ ಹವ್ಯಾಸ ಹೊಂದಿದ್ದು ಸುಮಾರು 20,000 ಕ್ಕೂ ಅಧಿಕ ಛಾಯಾಚಿತ್ರಗಳು ಸಂಗ್ರಹ ಮಾಡಿದ್ದು ಆಸಕ್ತರ ಅಧ್ಯಯನಕ್ಕೆ ಹಾಗು ಪರಿಚಯಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ ಎಂದು ವಿಶ್ಲೇಷಿತವಾಗಿದೆ.
ಲೇಖಕ ಎನ್.ಎಸ್. ಶ್ರೀನಿವಾಸಮೂರ್ತಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ವಿದ್ಯಾಭ್ಯಾಸವನ್ನು ಪಡೆದಿರುವ ಅವರು ನಾಲ್ಕು ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕಳೆದ 24 ವರ್ಷಗಳಿಂದ ಕರ್ನಾಟಕ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-1, ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-2 ...
READ MORE