ಹುಟ್ಟು ಸಾವಿನ ಕುರಿತು ಒಂದು ಅಲೌಕಿಕ-ಲೌಕಿಕ ದೃಷ್ಟಿಯಲ್ಲಿ ಅತೀತವಾಗಿ ಚರ್ಚಿಸುತ್ತಿದ್ದವರು ಓಶೋ. ಅವರು ಶಿಕ್ಷಣದ ವಿಚಾರವಾಗಿಯೂ ಚಿಂತನೆಗಳನ್ನು ನಡೆಸಿದರ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ಇಂದು ಶಿಕ್ಷಣವು ಹಣ-ಅಂತಸ್ತು ಅಧಿಕಾರಕ್ಕಾಗಿ ಹಪಹಪಿಸುವ ಜೀವಂತ ಶವಗಳನ್ನು ಸೃಷ್ಟಿಸುತ್ತಿದ್ದು ಬದುಕಿನ ಬಹುಮುಖ್ಯ ಚಿಂತನೆಗಳನ್ನು ಹೇಗೆ ಕಲಿಯಬೇಕೆಂಬ ನಿಟ್ಟಿನಲ್ಲಿ ಲೇಖಕ ಜಯಪ್ರಕಾಶ ನಾರಾಯಣ ಅವರು ಅನುವಾದಿಸಿದ ಕೃತಿ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’. ಶಿಕ್ಷಣ ಕ್ರಾಂತಿಯ ಸಾಧ್ಯತೆಗಳನ್ನು ಆಗು ಮಾಡುವ ಚಿಂತನೆಗಳ ಬಗ್ಗೆ ಓಶೋ ಅವರ ಉಪನ್ಯಾಸಗಳ ಗುಚ್ಛದಿಂದ ಆಯ್ದ ಒಂಭತ್ತು ಉಪನ್ಯಾಸಗಳ ಕನ್ನಡ ಅನುವಾದ ಇಲ್ಲಿದೆ.
ಪತ್ರಕರ್ತ ಬಿ.ಎಸ್. ಜಯಪ್ರಕಾಶ್ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್. ಜಾರ್ಜ್ ಅವರ ಎಂ.ಎಸ್., ಯು.ಆರ್. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...
READ MORE