‘ಶಾಸ್ತ್ರಸಾಹಿತ್ಯ’- ಇಂದಿನ ಗ್ರಹಿಕೆಗಳು ಲೇಖಕ ಡಾ.ಡಿ.ಕೆ. ಚಿತ್ತಯ್ಯ ಪೂಜಾರ್ ಸಂಪಾದಿಸಿರುವ ಕೃತಿ. ಈ ಕೃತಿಗೆ ಡಾ.ಬಿ. ವಿ. ವಸಂತ ಕುಮಾರ್ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. 'ಈ ಕೃತಿಯು ಭೂತಕಾಲವನ್ನು ವರ್ತಮಾನದದ ಒರೆಗಲ್ಲಿನ ಮೂಲಕ ಭವಿಷ್ಯದದ ಬೆಳಕಿಗಾಗಿ ನಡೆಸಿದ ವಿಶಿಷ್ಟವಾದ ಪ್ರಯತ್ನ' ಎನ್ನುತ್ತಾರೆ ವಸಂತ ಕುಮಾರ್. ಜೊತೆಗೆ ಹೊಸ ತಲೆಮಾರಿನ ಸಂಶೋಧಕರು ಹಳೆತಲೆಮಾರಿನ ಶಾಸ್ತ್ರಗಳೊಡನೆ ಅನುಸಂಧಾನ ನಡೆಸಿರುವುದು ಹಳೇ ಬೇರಿ ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಡಿವಿಜಿಯವರ ಮಾತನ್ನು ನೆನಪಿಸುತ್ತದೆ ಎನ್ನುತ್ತಾರೆ. ಅಲ್ಲದೇ ಸಂಸ್ಕೃತ ಹಾಗೂ ಶಾಸ್ತ್ರಸಾಹಿತ್ಯವನ್ನು ಕೆಲವರು ರಾಜಕೀಯ ವಿಚಾರವಾದಗಳ ಕಾರಣದಿಂದ ನಿರಾಕರಿಸುತ್ತಾ ಬಂದರು.
ಕನ್ನಡ ಭಾಷೆ ಮತ್ತು ಸಾಹಿತ್ಯ ಅಧ್ಯಯನ ಪಠ್ಯಕ್ರಮಗಳಿಂದ ತೆಗೆದುಹಾಕಿದರು. ಅವು ಕೇವಲ ಮೇಲ್ವರ್ಗದ ಪಂಡಿತರಿಗೆ ಮಾತ್ರ ಎನ್ನುತ್ತಾ ದೀಪ ಆರಿಸಿದರು. ಅದರ ಪರಿಣಾಮ ಮೇಲ್ವರ್ಗ ಹಾಗೂ ಕೆಳವರ್ಗ ಎರಡು ನೆಲೆಯ ವಿದ್ವಾಂಸರು ಎಷ್ಟೇ ಪ್ರತಿಭಾವಂತರಾಗಿದ್ದರು ಅಭ್ಯಾಸ ಮತ್ತು ವ್ಯುತ್ಪತ್ತಿ (ಶಾಸ್ತ್ರಜ್ಞಾನ, ಲೋಕಜ್ಞಾನ ಮತ್ತು ಕಾವ್ಯಾನುಭವ)ಗಳನ್ನು ಕಳೆದುಕೊಂಡು ಸೊರಗುವಂತಾಗಿದೆ. ಇಂಥ ಹೊತ್ತಿನಲ್ಲಿ ಮತ್ತೆ ಶಾಸ್ತ್ರಸಾಹಿತ್ಯದ ವಿದ್ವತ್ತಿಗೆ ಹೊಸತಲೆಮಾರು ಮುಖಮಾಡುವಂತೆ ಮಾಡಿರುವ ಪೂಜಾರರಿಗೆ ವಂದಿಸುತ್ತೇನೆ ಎಂದಿದ್ದಾರೆ. ಈ ಕೃತಿಯಲ್ಲಿ ಕನ್ನಡ ಶಾಸ್ತ್ರ ಸಾಹಿತ್ಯ ಪರಂಪರೆಯ ಉಗಮ ವಿಕಾಸದಿಂದ ಆರಂಭಿಸಿ ಹಸ್ತಪ್ರತಿ, ಗಜಶಾಸ್ತ್ರ, ಪ್ರಶ್ನಶಾಸ್ತ್ರ, ವಾಸ್ತುಶಾಸ್ತ್ರ, ಗಣ ತಶಾಸ್ತ್ರ, ಸೂಪಶಾಸ್ತ್ರ, ಶಕುನ ಶಾಸ್ತ್ರ, ವೈದ್ಯಶಾಸ್ತ್ರ, ನಾಟ್ಯಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಕಾಮಶಾಸ್ತ್ರ, ಕೃಷಿ ಶಾಸ್ತ್ರದವರೆಗೆ ಹಲವು ಶಾಸ್ತ್ರಗಳನ್ನು ಕುರಿತ ಲೇಖನಗಳಲ್ಲದೆ ಜೊತೆಗೆ ಸಾಹಿತ್ಯ ಸಂಬಂಧಿ ಶಾಸ್ತ್ರಸಾಹಿತ್ಯಗಳನ್ನು ಕುರಿತ 52 ಲೇಖನಗಳಿವೆ. ಈ ರೀತಿಯ ಅಧ್ಯಯನ ನಮ್ಮ ಅರಿವನ್ನು ಪಾರಿಭಾಷಿಕ ಸಂಪತ್ತನ್ನು ಹೆಚ್ಚಿಸುತ್ತದೆ. ಸಾಹಿತ್ಯ ಕೃತಿಗಳ ಆಸ್ವಾದನೆ ಮತ್ತು ವಿಮರ್ಶೆಗೂ ನೆರವಾಗುತ್ತದೆ.
ಪಾಶ್ಚಾತ್ಯ ಮಾನದಂಡಗಳು ನೀಡಲಾಗದ ಶಕ್ತಿ ಸಾಧ್ಯತೆಗಳನ್ನು ನೀಡುತ್ತದೆ. ಶಾಸ್ತ್ರಸಾಹಿತ್ಯದ ಅಧ್ಯಯನವೆಂದರೆ ‘ಬೇರು’ಗಳ ಅಧ್ಯಯನ ಎಂದರ್ಥ. ಮರದ ಬೇರು ಬಹುಬಗೆಯ ಸಾರವನ್ನು ಹೀರಿ ಬೆಳೆದಿರುತ್ತದೆ ಹೂ ಹಣ್ಣುಗಳನ್ನು ನೀಡಿರುತ್ತದೆ. ಬೇರು-ಗೊಬ್ಬರ-ಹೂ ಹಣ್ಣುಗಳಿಗೆ ಸಾವಯವ ಸಂಬಂಧವಿರುವುದನ್ನು ಇಂಥ ಪೂರ್ಣ ಅಧ್ಯಯನದಿಂದ ಅರಿಯಲು ಸಾಧ್ಯವಾಗುತ್ತದೆ ಎಂದು ಬಿ.ವಿ. ವಸಂತಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ.
ಲೇಖಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ದವಡ ಬೆಟ್ಟಗ್ರಾಮದವರು. ದವಡಬೆಟ್ಟ, ಮಧುಗಿರಿ, ಚನ್ನಪಟ್ಟಣ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, 1996-97 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವೀಧರರು. 2001ರಲ್ಲಿ ಡಾ.ಜಿ.ಆರ್. ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ‘ನಿಡುಗಲ್ಲು:ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಡಾಕ್ಟರೇಟ್ ಪದವೀಧರರು. ಚಿತ್ತಯ್ಯ ಅವರು ಶಾಸ್ತ್ರೀಯ ಭಾಷೆಯಲ್ಲಿಅಧ್ಯಯನ ನಡೆಸಿದ್ದು, ಸೃಜನಶೀಲ ಮತ್ತು ಸಂಶೋಧನಾ ಬರಹಗಳಾಗಿ 29 ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಅಕ್ಷರ ಮಂದಿರದ ಅಪೇಕ್ಷೆಯಂತೆ ಮಕ್ಕಳಿಗೆ ಮೀಸಲಾದ 50 ಪುಸ್ತಕಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಇವರಿಗೆ 2017ನೇ ಸಾಲಿನ ರಾಜ್ಯಮಟ್ಟದ ‘ಶ್ರೀವಿಜಯಾ ಸಾಹಿತ್ಯ ...
READ MORE