ಸೆಳೆರೆಂಬೆ

Author : ತಿಪ್ಪೇಸ್ವಾಮಿ ಕೆ. ಟಿ.

Pages 80

₹ 60.00




Year of Publication: 2018
Published by: ತಿಪ್ಪೆಸ್ವಾಮಿ ಕೆ. ಟಿ.
Address: ಕಳ್ಳಂ ಬೆಳ್ಳ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ-572125
Phone: 9844456208

Synopsys

ಇಂದು ನಮ್ಮ ಜನಸಂಖ್ಯೆಯ ಹೆಚ್ಚಿನ ಪಾಲು ಯುವಜನರೇ ಇದ್ದಾರೆ. ಆದರೂ ಯುವಜನರು ಈ ದೇಶದ ಸಾರ್ವಜನಿಕ ಆಗುಹೋಗುಗಳಲ್ಲಿ ಅಷ್ಟೊಂದು ರಚನಾತ್ಮಕವಾಗಿ ತೊಡಗಿಸಿಕೊಂಡಿಲ್ಲ. ಪಂಚಾಯತನಲ್ಲಿ ಯುವಜನರ ಭಾಗವಹಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆಯ ಮಹತ್ವ,ರಾಜಕೀಯ ಪ್ರಜ್ಞೆಯ ಅಭಾವವನ್ನು ನಿಭಾಯಿಸುವ ಬಗೆ ಹೇಗೆ, ಅವರ ಕಾರ್ಯ ನಿರ್ವಹಣೆಯ ಸಂಪೂರ್ಣ ವಿವರ ಈ ಕೃತಿಯಲ್ಲಿ ಸಿಗುತ್ತದೆ. ಯುವಜನರು ಪಂಚಾಯತ್ ಜೊತೆ ಆಪ್ತವಾಗಿ ಕೆಲಸ ಮಾಡಲು ಅನುಕೂಲವಾಗಬಹುದಾದ ಹಲವು ವಿಷಯಗಳ ಪ್ರಕ್ರಿಯಾತ್ಮಕ ದೃಷ್ಟಿ ಕೋನವನ್ನು ಲೇಖಕ ತಿಪ್ಪೇಸ್ವಾಮಿ ಈ ಪುಸ್ತಕದಲ್ಲಿ ಬಳಸಿದ್ದಾರೆ.

About the Author

ತಿಪ್ಪೇಸ್ವಾಮಿ ಕೆ. ಟಿ.
(04 April 1986)

ತಿಪ್ಪೇಸ್ವಾಮಿ ಕೆ. ಟಿ. ಅವರು 4 ಏಪ್ರಿಲ್ 1986ರಲ್ಲಿ ಶಿವಮ್ಮ ಮತ್ತು ತಿಪ್ಪಣ್ಣ ದಂಪತಿ ಮಗನಾಗಿ ಸಿರಾ ತಾಲ್ಲೂಕು ಕಳ್ಳಂಬೆಳ್ಳ ಗ್ರಾಮದಲ್ಲಿ ಜನಿಸಿದರು. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರು. ಬೆಂಗಳೂರಿನ ಭಾರತೀಯ ಮನೋವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಉಪನ್ಯಾಸಕರಾಗಿ ಮತ್ತು ಸಮಾಲೋಚಕರಾಗಿ ಪ್ರಾರಂಭಿಸಿದರು. ಯುವಜನರ ಸಬಲೀಕರಣ ಕ್ಷೇತ್ರದಲ್ಲಿ ಅತೀವ ಆಸಕ್ತಿ ಇದ್ಯುದು, ಯುವಜನ ಪರ ಹಲವು ಲೇಖನಗಳನ್ನು ಮತ್ತು ಯುವಜನರ ಅಭಿವೃದ್ಧಿಗೆ ಪೂರಕವಾದ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯುವಜನ ಕಾರ್ಯ ಮತ್ತು ಸಮುದಾಯಾಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ನಿರಂತರ ಸೇವೆ ಗುರುತಿಸಿ ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ, ...

READ MORE

Related Books