ಬೆಳವಾಡಿ ಮಂಜುನಾಥ ಅವರ ಲೇಖನಗಳ ಸಂಕಲನ ಸಾತತ್ಯ. ಈ ಕೃತಿಯಲ್ಲಿ ಸಿ.ವಿ.ತಿರುಮಲರಾವ್ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಪ್ರಾಧ್ಯಾಪಕರು ಡಾ. ಮಾನಸ ರಘುನಂದನ್ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ‘ಸಾತತ್ಯ’ ಎಂಬುದು ವಿಶಿಷ್ಟ ಪರಿಕಲ್ಪನೆ. ಕರ್ತೃ ಹಾಗೂ ಸಹೃದಯನ ನಡುವಿನ ಅವಿಚ್ಛಿನ್ನ ಸಂಬಂಧವನ್ನು ಹೇಳುವಂತದ್ದು. ಕೃತಿಯೊಂದರ ಸಮಗ್ರ ಅವಲೋಕನವೇ ಅದಕ್ಕೆ ತಳಹದಿ ಎಂಬುದನ್ನು ಸಾತತ್ಯ ಕೃತಿ ಮನವರಿಕೆ ಮಾಡುತ್ತದೆ ಎಂಬುದಾಗಿ ಹೇಳಿದ್ದಾರೆ.
ಡಾ. ಬೆಳವಾಡಿ ಮಂಜುನಾಥ ಅವರು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯಲ್ಲಿ ಜನಿಸಿದರು ಪ್ರಾಥಮಿಕ ವಿದ್ಯಾಭ್ಯಾಸ ಬೆಳವಾಡಿ ಸರ್ಕಾರಿ ಶಾಲೆ.ಪ್ರೌಢ ಶಿಕ್ಷಣ ಕಳಸಾಪುರ ವಿನಾಯಕ ಪ್ರೌಢಶಾಲೆ.ಚಿಕ್ಕಮಗಳೂರು ಐ.ಡಿ.ಎಸ್. ಜಿ ಸರ್ಕಾರಿ ಕಾಲೇಜಿನಿಂದ ಬಿ.ಎ ಪದವಿ. ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ. ಎ ಪ್ರಥಮ ಶ್ರೇಣಿಯೊಂದಿಗೆ ಚಿನ್ನದ ಪದಕ.ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಕುವೆಂಪು ವಿಶ್ವ ವಿದ್ಯಾನಿಲಯದಿಂದ ಬಿ.ಇಡಿ ಪದವಿ. ಧಾರವಾಡ ದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್ ಡಿ.ಪದವಿ. ಚನ್ನರಾಯ ಪಟ್ಟಣ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು. . ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸರ್ಕಾರಿ ಪದವಿ ಪೂರ್ವ ...
READ MORE