‘ಸಂತೋಷದ ಹುಡುಕಾಟ’ ಲೇಖಕಿ ಎ.ಪಿ. ಮಾಲತಿ ಅವರ ಲೇಖನಗಳ ಸಂಕಲನ. ಇಲ್ಲಿ ಸಂತೋಷದ ಹುಡುಕಾಟ, ಒತ್ತಡದ ಜೀವನ ಶೈಲಿ, ನಂಬಿಕೆಯ ನೆಲೆ, ಭಯದ ಅರಿವು, ಮೋಹ ಬಂಧನದಾಚೆಗೆ, ತೃಪ್ತಿ, ಸಹನೆ ವಜ್ರದ ಕವಚ, ಅರಳಲಿ ಚಾರಿತ್ಯ್ರವೆಂಬ ಪುಷ್ಪ, ಗೆಳೆತನದ ಮಹತ್ವ, ಕಲೆ-ಆರಾಧನೆ ಮತ್ತು ನಗು ನಗುತಾ ನಲಿ ಎಂಬ ಹನ್ನೊಂದು ಲೇಖನಗಳು ಸಂಕಲನಗೊಂಡಿವೆ. ಕೃತಿಯ ಮೂಲ ಉದ್ದೇಶ ಬಾಹ್ಯದ ಸಂತೋಷ, ಆನಂದ ಅಂತರ್ಮುಖಿ ಆಗುವತನಕ ಅಂತರಂಗದಲ್ಲಿ ಬೆಳಕು ಕಾಣುವ ತನಕ ನಮ್ಮ ಸಂತೋಷದ ಹುಡುಕಾಟ ನಡೆಯಲೇ ಬೇಕೆಂಬ ಆಶಾಭಾವನೆಯಾಗಿದೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE