‘ಸಂವೇದನೆ’ ಲೇಖಕ ನಾ. ದಿವಾಕರ ಅವರ ಲೇಖನ ಸಂಕಲನ. ಈ ಕೃತಿಗೆ ಮೈಸೂರು ಮಾನಸಗಂಗೋತ್ರಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಮುಜಾಫರ್ ಅಸ್ಸಾದಿ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ನಾ. ದಿವಾಕರ್ ಒಬ್ಬ ಗಂಭೀರವಾದ ಬರಹಗಾರ, ಚಿಂತಕ, ವಿಶ್ಲೇಷಕ, ಸಂಶೋಧಕ ಅವರ ಕಲ್ಪನೆಯಲ್ಲಿ ಭಾರತ ಈಗಲೂ ಒಂದಿಷ್ಟು ಮಾತನಾಡಲು ತವಕಿಸುತ್ತದೆ. ಆದಕಾರಣ ಮುಂದೆ ಬರುವ ಅಪಾಯಗಳನ್ನು ಮತ್ತೆ ಮತ್ತೆ ನೆನಪಿಸುತ್ತಾರೆ ಹಾಗೂ ಎಚ್ಚರಿಸುತ್ತಾರೆ. ಈ ಎಚ್ಚರಿಕೆಗಳ ನಡುವೆ ಹೊಸ ಸಾಧ್ಯತೆಗಳನ್ನು ಹುಡುಕುತ್ತಾರೆ ಮತ್ತು ಅವುಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಿಲ್ಲ. ಇಲ್ಲಿ ಭ್ರಮನಿರಸನವೂ ಇದೆ. ಆಶಾವಾದವೂ ಇದೆ ಎಂದಿದ್ದಾರೆ ಪ್ರೊ. ಮುಜಾಫರ್ ಅಸ್ಸಾದಿ. ಜೊತೆಗೆ ಅವರ ಯೋಚನೆಗಳು ಸಾರ್ವಕಾಲಿಕ, ಅದರಲ್ಲಿ ಎಡಪಂಥೀಯ ಚಿಂತನೆಗಳು, ಆಲೋಚನೆಗಳು ಇವೆ. ಉದಾರವಾದಿ ನೆಲೆಯ ಆಲೋಚನೆಗಳೂ ಇವೆ. ಇದೊಂದು ಜ್ಞಾನದ ಹೈಬ್ರಿಡಿಟಿ(ಸಂಕುರ). ಇಂತಹ ಆಲೋಚನೆಗಳು ಭಾರತವನ್ನು ಜೀವಂತವಾಗಿರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಸಂವಾದಗಳು ಇನ್ನಷ್ಟು ಬರಲಿ. ಮಾತು ನಿಂತ ಭಾರತಕ್ಕೆ ಹೊಸ ಮಾತುಗಳನ್ನು, ಹೊಸ ಭಾಷೆಗಳನ್ನು, ಹೊಸ ಆಲೋಚನೆಗಳನ್ನು ನೀಡಲಿ, ಸೋತು ಹೋದ ಭಾರತಕ್ಕೆ ಹೊಸ ಚೈತನ್ಯವನ್ನು ಹೊಸ ಹುರುಪನ್ನು ದೃಷ್ಟಿಕೋನವನ್ನು ಎಂದು ಹಾರೈಸಿದ್ದಾರೆ.
ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...
READ MORE