‘ಸಂವಹನ ಸಾಧ್ಯತೆ’ ಕೃತಿಯು ಮಹಾಬಲೇಶ್ವರ ರಾವ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಸಂವಹನ ರಹಿತ ಮಾನವ ಜೀವನ ಆನೂಹ್ಯ. ಮುಂಜಾನೆಯಿಂದ ತಡರಾತ್ರಿವರೆಗೂ ನಾವು ಈ ಜಗತ್ತಿನಲ್ಲಿ ಪರಸ್ಪರ ಸಂವಹನ ನಿರತರಾಗಿರುತ್ತೇವೆ. ಸಂವಹನ ವ್ಯಕ್ತಿಗತ ಹಾಗೂ ವ್ಯಕ್ತಿ ಬದುಕನ್ನು ಒಂದು ಆಕಾರದಲ್ಲಿ ರೂಪಿಸುತ್ತದೆ. ಅದು ಕುಟುಂಬ, ಸಮುದಾಯ, ಸಮಾಜ, ದೇಶಗಳೆಂಬ ಸಮಾಜೋ-ಸಾಂಸ್ಕೃತಿಕ ಮತ್ತು ರಾಜಕೀಯ ಸಂಘಟನೆಗಳ ಬೆನ್ನೆಲುಬು, ಪರಸ್ಪರ ಸಂವಹನ ಕೆಟ್ಟು ಹೋದರೆ ಬಾಳೊಂದು ಗೋಳು, ಸಾಮುದಾಯಿಕ ಸಂವಹನ ಹದ ತಪ್ಪಿದರೆ ಊರಿಗೆ ಊರೇ ಹೊತ್ತಿ ಉರಿಯುತ್ತದೆ. ರಾಷ್ಟ್ರಗಳ ನಡುವಣ ಸಂವಹನ ಸಂಬಂಧಗಳು ತಾಳ ತಪ್ಪಿದರೆ ಘೋರ ಜಾಗತಿಕ ವಿನಾಶ ಕಟ್ಟಿಟ್ಟ ಬುತ್ತಿ. ಒಟ್ಟು ಜಗತ್ತಿನ ಬದುಕಿನ ನೆಮ್ಮದಿಗೆ ಸಂವಹನ ಊರುಗೋಲು, ಪ್ರಭಾವಿ, ಪರಿಣಾಮಕಾರಿ ಸಂವಹನ ಲೋಕಗಳನ್ನು ಬೆಳಗುತ್ತದೆ. ನಿತ್ಯದ ವೇದಿಕೆಯ ಬಂದುಹೋಗುವ ಮಿಂಚಂಚೆ, ಬಳಸುವ ಸಾಮಾಜಿಕ ಮಾಧ್ಯಮಗಳು, ಜಾಲತಾಣಗಳು ಅಷ್ಟೇಕೆ...ಸದ್ಯದ ಡಿಜಿಟಲ್ ಸಂತೆ ಎಲ್ಲವೂ ಸರಿಯಾದ ಸಮರ್ಪಕವಾದ ಸಂವಹನ ಸಾಧ್ಯತೆಗಳನ್ನು ಅವಲಂಬಿಸಿದೆ ’ ಎಂದಿದೆ.
ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ. ...
READ MORE